ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೇಲ್ವೆ ಕಂಟ್ರೋಲ್ ರೂಮ್‌ ನುಗ್ಗಿದ ಕಿಂಗ್ ಕೋಬ್ರಾ!

ರಾಜಸ್ಥಾನ: ಮನುಷ್ಯನಿಗೆ ಸಣ್ಣದೊಂದು ಭಯ ಇದ್ದೇ ಇರುತ್ತದೆ. ಆದರೂ ಧೈರ್ಯದಿಂದಲೇ ಜೀವನ ಮಾಡುತ್ತಾನೆ. ಆದರೆ, ಇದೇ ಧೈರ್ಯವಂತ ವ್ಯಕ್ತಿಯ ಎದುರಿಗೆ ಕಿಂಗ್ ಕೋಬ್ರಾ ಬಂದು ಕುಳಿತರೇ ಏನ್ ಆಗಬೇಡ ಹೇಳಿ ? ಇಂತಹ ಒಂದು ಪರಿಸ್ಥಿತಿಯನ್ನ ರಾಜಸ್ಥಾನದ ಕೋಟಾ ರೈಲ್ವೆ ಸ್ಟೇಶನ್ ಸಿಬ್ಬಂದಿ ಎದುರಿಸಿದ್ದಾರೆ.

ಹೌದು. ಕೋಟಾ ರೇಲ್ವೆ ಸ್ಟೇಶನ್ ಸದಾ ಜನರಿಂದ ಕೂಡಿರುತ್ತದೆ. ಸಿಬ್ಬಂದಿಗಳೂ ತಮ್ಮದೇ ಕೆಲಸದಲ್ಲಿಯೇ ಬ್ಯುಜಿ ಆಗಿರ್ತಾರೆ. ಆದರೆ, ಇದೇ ಸ್ಟೇಶನ್‌ನ ಕಂಟ್ರೋಲ್ ರೂಮ್‌ಗೆ ಸುಮಾರು 4 ಮಾರು ಉದ್ದದ ಕಿಂಗ್ ಕೋಬ್ರಾ ನುಗ್ಗಿ ಬಿಟ್ಟಿದೆ. ಕಂಟ್ರೋಲ್ ರೂಮ್‌ನ ಪ್ಯಾನಲ್ ಮೇಲೆ ಕುಳಿತು ಭಯ ಹುಟ್ಟಿಸಿದೆ.

ಆದರೆ, ಇಲ್ಲಿರೋ ಯಾವುದೇ ಸಿಬ್ಬಂದಿಗೂ ಈ ಕೋಬ್ರಾ ತೊಂದರೆ ಕೊಟ್ಟಿಲ್ಲ. ಬದಲಾಗಿ ತನ್ನಪಾಡಿಗೆ ತಾನು ಪ್ಯಾನಲ್ ಮೇಲೆ ಹೆಡೆ ಎತ್ತಿಕೊಂಡು ಕುಳಿತು ಬಿಟ್ಟಿದೆ. ಆದರೂ ಭಯ ಅನ್ನೋದು ಇದ್ದೇ ಇರುತ್ತದೆ ಅಲ್ವೇ.ಅದಕ್ಕೇನೆ ರೇಲ್ವೆ ಸಿಬ್ಬಂದಿ ಉರಗ ರಕ್ಷಕರನ್ನ ಕರೆಸಿ ಈ ಕೋಬ್ರಾವನ್ನ ಸೆರೆಡಿಸಿದ್ದಾರೆ.

Edited By :
PublicNext

PublicNext

03/06/2022 01:18 pm

Cinque Terre

57.9 K

Cinque Terre

2

ಸಂಬಂಧಿತ ಸುದ್ದಿ