ತಮಿಳುನಾಡಿನ ಕಾಂಚೀಪುರಂನ ವ್ಯಕ್ತಿಯೊಬ್ಬರು ಅಪರೂಪದ ಸ್ಕೆಚ್ ಮಾಡುವ ಮೂಲಕ ಉದ್ಯೋಮಿ ಆನಂದ ಮಹೀಂದ್ರಾ ಅವರ ಮನಸ್ಸು ಗೆದ್ದಿದ್ದಾರೆ.
ಗಣೇಶ್ ಎಂಬ ಕಲಾವಿದ 741 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ತಮಿಳು ಅಕ್ಷರಗಳಿಂದ ಆನಂದ ಮಹೀಂದ್ರಾ ಅವರ ಭಾವಚಿತ್ರವನ್ನು ರಚಿಸಿದ್ದಾರೆ. ಇದನ್ನು ಕಂಡು ಮಹೀಂದ್ರ ಅವರು ಮೂಕವಿಸ್ಮಿತರಾಗಿದ್ದಾರೆ. ಗಣೇಶ ಅವರು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ ಅವರು ವಾಹ್, ನನ್ನ ಚಿತ್ರವನ್ನು 741 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ತಮಿಳು ಅಕ್ಷರಗಳಿಂದ ರೂಪಿಸಲಾಗಿದೆ, ನಾನು ಆಶ್ಚರ್ಯ ಪಡುತ್ತೇನೆ. ಚಿತ್ರ ಬಿಡಿಸಿದವರನ್ನು ಶ್ಲಾಘಿಸಿಸುತ್ತೇನೆ. ನನ್ನ ಮನೆಯಲ್ಲಿ ಭಾವಚಿತ್ರವನ್ನು ಇರಿಸಲು ಬಯಸುತ್ತೇನೆ ಎಂದು ತಮೀಳು ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
PublicNext
24/05/2022 02:38 pm