ಲಖನೌ: ಅವರಿಬ್ಬರು ಮೊದಲು ಇಷ್ಟಪಟ್ಟು ಮದುವೆಯಾಗಲು ಒಪ್ಪಿದ್ದರು ಆದ್ರೆ ಹುಡುಗ ಹುಡುಗಿಯಿಂದ ಸತ್ಯವೊಂದನ್ನು ಮುಚ್ಚಿ ಇಟ್ಟಿದ್ದ.ಹೌದು ಉತ್ತರ ಪ್ರದೇಶದ ಉನ್ನಾವೊದಲ್ಲಿ ವರನೋರ್ವ ತನ್ನ ಬೋಳುತಲೆ ಮರೆಮಾಚಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಮದುವೆ ಸಮಾರಂಭದಲ್ಲೇ ವರನ ವಿಗ್ ಕಳಚಿದ್ದನ್ನು ಕಂಡು ವಧು ಶಾಕ್ ಆಗಿದ್ದಾಳೆ.
ಮದುವೆ ಮೆರವಣಿಗೆ ವೇಳೆ ವರ ತಲೆ ಸುತ್ತಿ ಬಿದ್ದಿದ್ದಾನೆ. ಆ ವೇಳೆ ವರನ ತಲೆಗೆ ಹಾಕಿದ್ದ ವಿಗ್ ಕಳಚಿದೆ. ಇದನ್ನು ಗಮನಿಸಿದ ವಧು ಕಡೆಯವರು ಕೂದಲು ಇದೆ ಎಂದು ಸುಳ್ಳು ಹೇಳಿದ್ದಿಯಾ ಎಂದು ವರನಿಗೆ ಸರಿಯಾಗಿ ಗೂಸಾ ಕೊಟ್ಟಿದ್ದಾರೆ.ವಧು ಕೂಡ ತಾನು ಮದುವೆ ಆಗೋದಿಲ್ಲ ಎಂದು ನಿರಾಕರಿಸಿದ್ದಾಳೆ. ಇನ್ನು, ಪೊಲೀಸ್ರ ಮುಂದೆಯೇ ವಧು ಕಡೆಯೋರು ವರನ ಕುಟುಂಬದಿಂದ 5 ಲಕ್ಷದ 60 ಸಾವಿರ ರೂ. ಪರಿಹಾರ ಡಿಮ್ಯಾಂಡ್ ಮಾಡಿ ಪಡೆದಿದ್ದಾರೆ.
PublicNext
23/05/2022 09:53 pm