ಹೈದ್ರಾಬಾದ್: ಒಬ್ಬ ವ್ಯಕ್ತಿ ಕಿಡ್ನಿಗಳಲ್ಲಿ ಬರೋಬ್ಬರಿ 206 ಸ್ಟೋನ್‌ಗಳು ಪತ್ತೆ ಆಗಿವೆ. ವೈದ್ಯರ ಸತತ ಒಂದು ಗಂಟೆಯ ಶಸ್ತ್ರ ಚಿಕಿತ್ಸೆ ಮೂಲ ಕಿಡ್ನಿ ಸ್ಟೋನ್ ತೆಗೆದಿದ್ದಾರೆ. ಇದರ ಪರಿಣಾಮ ನೋವಿನಿಂದಲೇ ಬಳಲುತ್ತಿದ್ದ ಆ ವ್ಯಕ್ತಿ ಈಗ ನಿರಾಳರಾಗಿದ್ದಾರೆ.
ತೆಲಂಗಾಣದ ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದರು ವ್ಯಕ್ತಿಯ ಕಿಡ್ನಿಯಲ್ಲಿದ್ದ 206 ಕಿಡ್ನಿ ಸ್ಟೋನ್‌ಗಳನ್ನ ತೆಗೆದು ಹಾಕಿದ್ದಾರೆ.
56 ವರ್ಷದ ನೆಲಗೊಂಡ ನಿವಾಸಿ ವೀರಮಳ್ಳ ರಾಮಲಕ್ಷ್ಮಯ್ಯ ಅವರ ಕಿಡ್ನಿಯಲ್ಲಿಯೇ 206 ಕಿಡ್ನಿಗಳಿದ್ದವು. ಸುಮಾರು 6 ತಿಂಗಳಿನಿಂದ ನೋವು ಅನುಭವಿಸುತ್ತಿದ್ದು. ಅದನ್ನ ತಡೆಯಲು ಮಾತ್ರೆಗಳನ್ನೂ ತೆಗೆದುಕೊಳ್ಳುತ್ತಿದ್ದರು.
ಆದರೆ, ಏನೂ ಪ್ರಯೋಜನ ಆಗದೇ ಇದ್ದಾಗ, ಈ ಎಜಿಜಿ ಆಸ್ಪತ್ರೆಗೆದ ದಾಖಲಾಗಿದ್ದರು. ವೀರಮಳ್ಳ ಅವರ ಕಿಡ್ನಿಯಲ್ಲಿ ಇರೋ ಸ್ಟೋನ್ ಗಳನ್ನ ಇಲ್ಲಿಯ ವೈದ್ಯರು ಒಂದು ಗಂಟೆ ಶಸ್ತ್ರ ಚಿಕಿತ್ಸೆ ಮಾಡಿ ಎಲ್ಲ ಕಲ್ಲುಗಳನ್ನು ಹೊರಗೆ ತೆಗೆದಿದ್ದಾರೆ.
ಕೊನೆಗೆ ಅವುಗಳ ಲೆಕ್ಕವನ್ನೂ ಮಾಡಿದ್ದಾರೆ. ಆಗ 206 ಕಲ್ಲುಗಳಿದ್ದವು ಎಂದು ವೈದ್ಯ ಪೊಲಾ ನವೀನ್ ಕುಮಾರ್ ಹೇಳಿದ್ದಾರೆ.
PublicNext
20/05/2022 11:49 am