ಮುಂಬೈ: ರತನ್ ಟಾಟಾ ಅವರು ಭಾರತದ ಅತ್ಯಂತ ಪ್ರಸಿದ್ಧ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ಹೀಗಿದ್ದರೂ ಅವರು ಇಂದಿಗೂ ಸರಳತೆ, ಮಾನವೀಯತೆಗೆ ಸದಾಕಾಲ ಉದಾಹರಣೆಯಾಗಿ ಬೆಳೆದು ಬಂದಿದ್ದಾರೆ. ಇದನ್ನು ಈಗ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಹೌದು. ರತನ್ ಟಾಟಾ ಅವರು ಯಾವುದೇ ಭದ್ರತೆ ಇಲ್ಲದೆ ಮುಂಬೈನಲ್ಲಿರುವ ತಮ್ಮದೆ ಮಾಲೀಕತ್ವದ ತಾಜ್ ಹೋಟೆಲ್‌ಗೆ ಪುಟ್ಟ ನ್ಯಾನೋ ಕಾರಿನಲ್ಲಿ ಆಗಮಿಸಿದ್ದಾರೆ. ತಕ್ಷಣವೇ ಹೋಟೆಲ್ ಸಿಬ್ಬಂದಿ ಸ್ವಾಗತಿಸಿ ಕರೆದೊಯ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರತನ್ ಟಾಟಾ ಅವರ ಸರಳತೆ ಬಗ್ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಭಾರತದ ಮಧ್ಯಮ ವರ್ಗದ ಕುಟುಂಬಗಳು ಸ್ಕೂಟರ್ ಮೇಲೆ ಮಕ್ಕಳು, ಪತ್ನಿ ಜೊತೆ ಪ್ರಯಾಣ, ಹಾಳು, ಗುಂಡಿ ಬಿದ್ದ ರಸ್ತಗಳಲ್ಲಿನ ಪ್ರಯಾಣ ತಪ್ಪಿಸಲು ರತನ್ ಟಾಟಾ ನ್ಯಾನೋ ಕಾರನ್ನು ಪರಿಚಯಿಸಿದ್ದರು. 1 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ನ್ಯಾನೋ ಕಾರನ್ನು ಪರಿಚಚಯಿಸಲಾಗಿತ್ತು. ಇದೇ ಕಾರಿನಲ್ಲಿ ರತನ್ ಟಾಟಾ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ರ್ಯಾಂಕ್ ಪಡೆದಿರುವ ತಮ್ಮದೇ ಸ್ಟಾರ್ ಹೋಟೆಲ್ ತಾಜ್‌ಗೆ ಆಗಮಿಸಿದ್ದಾರೆ.
PublicNext
18/05/2022 10:57 pm