ಶಿವಮೊಗ್ಗ: ಪೊಲೀಸರಲ್ಲೂ ಮಾನವೀಯತೆ ಇದೆ. ಅವರು ಕ್ರೂರಿಗಳಲ್ಲ. ರಸ್ತೆ ಸಂಚಾರ ಅಂತ ಬಂದ್ರೆ, ಸಂಚಾರಿ ಪೊಲೀಸರು ಆಗಾಗ ಮಾನವೀಯತೆ ಮರೆಯುತ್ತಾರೆ. ಅಂತಹ ಒಂದು ಘಟನೆಯ ವೀಡಿಯೋ ವೈರಲ್ ಆಗಿದೆ. ಬನ್ನಿ, ನೋಡೋಣ.
ನಗರದ ಅಹ್ಮದ್ ಸರ್ಕಲ್ ನಲ್ಲಿ ಒಬ್ಬ ಅಜ್ಜ ಕೈಗಾಡಿಯಲ್ಲಿ ಹಲವು ಮೂಟೆ ಹೊತ್ತು ಕೊಂಡು ದಿಬ್ಬ ಏರಿ ಬರ್ತಾಯಿದ್ದರು. ಆದರೆ, ದಿಬ್ಬ ಏರಲು ಹರಸಾಹಸವನ್ನೂ ಪಡುತ್ತಿದ್ದರು.
ಇದನ್ನ ಗಮನಿಸಿದ ಸಂಚಾರಿ ಪೊಲೀಸ್ ರಮೇಶ್ ನೇರವಾಗಿ ಅಜ್ಜ ಬಳಿ ಬಂದಿದ್ದಾರೆ. ತಾವೂ ಕೈಗಾಡಿ ಎಳೆದು ಆ ಅಜ್ಜನಿಗೆ ಸಹಾಯ ಮಾಡಿದ್ದಾರೆ. ಈ ವೀಡಿಯೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
16/05/2022 07:48 am