ಉತ್ತರಪ್ರದೇಶ: ಗಾಜಿಯಾಬಾದ್‌ನಲ್ಲೊಬ್ಬ ಅಜ್ಜ ಬೈಕ್ ಸ್ಟಂಟ್ಸ್ ಮಾಡಿದ್ದಾನೆ. ಮಕ್ಕಳು ಮೊಮ್ಮಕ್ಕಳು ಅಂತ ಇರೋದು ಬಿಟ್ಟು, ಪಲ್ಸರ್ ಬೈಕ್ ಮೇಲೆ ಭಾರೀ ಸಾಹಸಗಳನ್ನ ಮಾಡಿ ಕುತೂಹಲ ಮೂಡಿಸಿದ್ದಾರೆ. ಕೆಲ ನೆಟ್ಟಿಗರು ಟೀಕೆ ಕೂಡ ಮಾಡಿದ್ದಾರೆ.
ಗಾಜಿಯಾಬಾದ್‌ನಲ್ಲಿರೋ ವೇವ್ ಸಿಟಿಯಲ್ಲಿಯೇ ಈ ಅಜ್ಜ ಬೈಕ್ ಸ್ಟಂಟ್ಸ್ ಮಾಡಿದ್ದಾನೆ. ಈ ಬೈಕ್ ಸ್ಟಂಟ್ಸ್ ಅನ್ನ ಅದೆಲ್ಲಿ ಕಲಿತನೋ ಈ ಅಜ್ಜ ಗೊತ್ತಿಲ್ಲ. ಆದರೆ, ಬೈಕ್ ಸ್ಟಂಟ್ಸ್ ಮಾತ್ರ ರೋಚಕವಾಗಿಯೇ ಇವೆ.
ಅಜ್ಜನ ಬೈಕ್ ಸ್ಟಂಟ್ಸ್ ಇರೋ 19 ಸೆಕೆಂಡ್‌ನ ಒಂದೇ ಒಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲ ನೆಟ್ಟಿಗರು "ಇದೇನ್ ಶೋಕಿ ಬಂದು ನಿಂಗೆ" ಅಂತಲೂ ಟೀಕೆ ಮಾಡಿದ್ದಾರೆ.
PublicNext
02/05/2022 10:47 am