ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರುಭೂಮಿಯಲ್ಲಿ ಕುಸಿದು ಬಿದ್ದ ವೃದ್ಧೆಯನ್ನ ಹೊತ್ತು 5 ಕಿ.ಮೀ ಸಾಗಿದ ಮಹಿಳಾ ಕಾನ್‌ಸ್ಟೆಬಲ್

ಅಹಮದಾಬಾದ್: ಪೊಲೀಸ್ ದೌರ್ಜನ್ಯದ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಆದರೆ ಹೊಸದಾಗಿ ನೇಮಕಗೊಂಡ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್, ವರ್ಷಾ ಪರ್ಮಾರ್ ಗುಜರಾತ್‌ನ ಕಚ್‌ನ ಬಿಳಿ ಮರುಭೂಮಿಯಲ್ಲಿ ವೃದ್ಧೆಯ ಜೀವವನ್ನು ಉಳಿಸಿ ಮಾನವೀಯತೆ ಮೆರೆದಿದ್ದಾರೆ.

27 ವರ್ಷದ ವರ್ಷಾ ಪರ್ಮಾರ್, ಇತ್ತೀಚೆಗೆ ರಾಪರ್ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದರು. ಕಚ್ ಮರಭೂಮಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ 86 ವರ್ಷದ ವೃದ್ಧೆಗೆ ವರ್ಷಾ ಸಹಾಯ ಮಾಡಿದ್ದಾರೆ. ವರ್ಷಾ ತನ್ನ ಹಿರಿಯರ ಆದೇಶಕ್ಕಾಗಿ ಕಾಯುವ ಬದಲು, ಸ್ವಯಂ ಪ್ರೇರಣೆಯಿಂದ ಬಾಯಾರಿದ ಮತ್ತು ದುರ್ಬಲ ಮಹಿಳೆಯನ್ನು ತನ್ನ ಭುಜದ ಮೇಲೆ ಎತ್ತಿಕೊಂಡು ಸುಡುವ ಬಿಸಿಲಿನಲ್ಲಿ ಐದು ಕಿಲೋಮೀಟರ್ ನಡೆದಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿರಿಯ ಅಧಿಕಾರಿಗಳು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

24/04/2022 05:07 pm

Cinque Terre

49.42 K

Cinque Terre

5

ಸಂಬಂಧಿತ ಸುದ್ದಿ