ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಣ್ಯ ರಕ್ಷಣೆಗೆ ದೇವರ ಮೊರೆ ಹೋದ ಗ್ರಾಮಸ್ಥರು !

ಚಿಕ್ಕಮಗಳೂರು: ಅರಣ್ಯ ನಾಶ ಆಗ್ತಾನೇ ಇದೆ. ಆದರೆ, ಇದರ ರಕ್ಷಣೆಗೆ ಇಲ್ಲೊಂದು ಗ್ರಾಮ ದೇವರ ಮೊರೆ ಹೋಗಿದೆ. ದೇವರ ಪೋಟೋ ಇರೋ ಬ್ಯಾನರ್ ಹಾಕಿ ಅರಣ್ಯ ರಕ್ಷಣೆಗೆ ಮುಂದಾಗಿದೆ.

ಚಿಕ್ಕಮಗಳೂರು ತಾಲೂಕಿನ ಸಿಂದಿಗೆರೆ ಮೀಸಲು ಅರಣ್ಯ ವಿಭಾಗದಲ್ಲಿ ಇಂತಹ ಒಂದು ಘಟನೆ ನಡೆದಿದೆ. ಗ್ರಾಮಸ್ಥರು ತಮ್ಮ ಈ ಕಾಡನ್ನ ಉಳಿಸಿಕೊಳ್ಳಲು ಒಂದು ವಿಶೇಷ ಐಡಿಯಾವನ್ನೇ ಮಾಡಿದ್ದಾರೆ.

ಹೌದು. ಪುರದಮ್ಮ ಹಾಗೂ ರೇವಣಸಿದ್ದೇಶ್ವರ ದೇವರು ಅರಣ್ಯವನ್ನ ಕಾಯುತ್ತಾರೆ. ಈ ಅರಣ್ಯವನ್ನ ನಾಶ ಪಡೆಸಲು ಮುಂದಾದರೆ, ಅವರಿಗೆ ಈ ದೇವರೇ ಶಿಕ್ಷೆ ಕೊಡ್ತಾನೆ ಅನ್ನೋದನನ್ನ ಗ್ರಾಮಸ್ಥರು ನಂಬಿದ್ದಾರೆ. ಅದನ್ನೇ ಬ್ಯಾನರ್ ಮೂಲಕ ನಂಬಿಸೋ ಕೆಲಸವೂ ಇಲ್ಲಿ ಆಗಿದೆ. ಹಾಗೇನೆ ಗ್ರಾಮಸ್ಥರ ಈ ಒಂದು ಯೋಚನೆ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.

Edited By :
PublicNext

PublicNext

22/04/2022 08:47 am

Cinque Terre

89.04 K

Cinque Terre

1

ಸಂಬಂಧಿತ ಸುದ್ದಿ