ಜೈಪುರ್: ರಾಜಸ್ಥಾನದ ಕರೌಲಿಯಲ್ಲಿನ ಕೋಮುಗಲಭೆ ಹಿಂಸಾರೂಪ ಪಡೆದಿದೆ. ಯುಗಾದಿ ಹಬ್ಬದಂದು ರಾಜಸ್ಥಾನದ ಕರೌಲಿ ಎಂಬ ಸ್ಥಳದಲ್ಲಿ ಹಿಂದೂಪರ ಸಂಘನೆಗಳು ಬೈಕ್ ರ್‍ಯಾಲಿ ಏರ್ಪಡಿಸಿದ್ದರು. ಈ ಬೈಕ್ ರ್‍ಯಾಲಿಯೂ ಹಿಂಸಾಚಾರಕ್ಕೆ ತಿರುಗಿ ಗಲಭೆಕೋರರು ಕರೌಲಿಯಲ್ಲಿ ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಈ ಗಲಭೆ ನಡುವೆ ಪೊಲೀಸ್ ಕಾನ್‌ಸ್ಟೇಬಲ್ ಪ್ರಾಣ ಲೆಕ್ಕಿಸದೆ ಕಂದನ ರಕ್ಷಿಸುತ್ತಿರುವ ಫೋಟೋ ಭಾರಿ ವೈರಲ್ ಆಗಿದೆ. 31 ವರ್ಷದ ಪೊಲೀಸ್ ಕಾನ್‌ಸ್ಟೇಬಲ್ ನೇತ್ರೇಶ್ ಶರ್ಮಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಕಿಯ ಜ್ವಾಲೆ, ಕಲ್ಲ ತೂರಾಟ, ದಾಳಿ ನಡುವಿನಿಂದ ಕಂದನನ್ನು ರಕ್ಷಿಸಿ ತರುತ್ತಿರುವ ಫೋಟೋವನ್ನು ರಾಜಸ್ಥಾನ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಈ ಫೋಟೋ ಕರೌಲಿಯ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸುತ್ತಿದೆ. ಹಿಂಭಾಗದಲ್ಲಿ ಕಟ್ಟಗಳು, ವಾಹನಗಳು ಹೊತ್ತಿ ಉರಿಯುತ್ತಿದೆ. ಕಲ್ಲೂ ತೂರಾಟಗಳು ನಡೆಯುತ್ತಿದೆ. ಧೈರ್ಯವಾಗಿ ಮಗುವಿಗೆ ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಾಜಸ್ಥಾನ ಐಪಿಎಸ್ ಅಧಿಕಾರಿ ಸುಕ್ರುತಿ ಮಹದೇವ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.
PublicNext
04/04/2022 10:59 pm