ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಜನರ ಸರಾಸರಿ ವಯಸ್ಸು 120.!- ಇಲ್ಲಿನ ಮಹಿಳೆಯರು 80ರಲ್ಲೂ 30-40 ವರ್ಷದವರಂತೆ ಕಾಣ್ತಾರೆ

ಕಾಶ್ಮೀರ ಕಣಿವೆಯ ಒಂದು ಬುಡಕಟ್ಟು ಜನಾಂಗದಲ್ಲಿನ ಜನರ ಸರಾಸರಿ ವಯಸ್ಸು 120 ಎಂದರೆ ನೀವು ನಂಬುತ್ತೀರಾ?

ಎಸ್‌. ನಂಬಲೆಬೇಕು, ಹುಂಜಾ ಸಮುದಾಯದ ಯುವಕ-ಯುವತಿಯರು ಆಜೀವನ ಯೌವ್ವನಭರಿತವಾಗಿರುತ್ತಾರೆ. ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ಥಾನ್‌ನ ಗುಡ್ಡಗಾಡು ಪ್ರದೇಶಗಳ ಮಧ್ಯೆ ಇರುವ ಒಂದು ಗ್ರಾಮದಲ್ಲಿ ಹುಂಜಾ ಸಮುದಾಯದ ಜನರು ವಾಸಿಸುತ್ತಾರೆ. ಇವರ ದೀರ್ಘಾಯುಷ್ಯದ ಗುಟ್ಟು ಆರೋಗ್ಯಪೂರ್ಣ ಜೀವನಶೈಲಿ. ಇವರ ಸರಾಸರಿ ವಯಸ್ಸು 110 ರಿಂದ 120 ವರ್ಷ. ಕೆಲವರು 150 ವರ್ಷಗಳ ಕಾಲ ಬದುಕಿದ್ದಾರೆ. ಹುಂಜಾ ಸಮುದಾಯದ ವಿಶೇಷತೆ ಎಂದರೆ ಅದರ ಮಹಿಳೆಯರು 80 ವರ್ಷದಲ್ಲೂ 30-40 ವರ್ಷದವರಂತೆ ಕಾಣುತ್ತಾರೆ. ಈ ಸಾಮರ್ಥ್ಯ ವೈದ್ಯರಿಗೂ ಕೂಡ ಒಂದು ಯಕ್ಷಪ್ರಶ್ನೆಯೇ ಆಗಿದೆ.

ಹುಂಜಾ ಸಮುದಾಯದ ಜನರ ಇವರ ಆಹಾರವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಬಿಸಿಲಿನಲ್ಲಿ ಒಣಗಿಸಿದ ವಾಲ್ ನಟ್ ತುಂಬಾ ಸೇವಿಸುತ್ತಾರೆ. ದವಸ ಧಾನ್ಯಗಳಲ್ಲಿ ಇವರು ಜೋಳ, ಸಜ್ಜೆ ಹಾಗೂ ಕುಟ್ಟು ಧಾನ್ಯ ಸೇವಿಸುತ್ತಾರೆ. ಇವರು ದಿನದಲ್ಲಿ ಕೇವಲ ಎರಡು ಬಾರಿಗೆ ಊಟ ಮಾಡುತ್ತಾರೆ.

ಹುಂಜಾ ಸಮುದಾಯದ ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸದೃಢರಾಗಿದ್ದಾರೆ. ಅಚ್ಚರಿ ಏನೆಂದರೆ ಈ ಸಮುದಾಯದ ಪುರುಷರು 90 ವರ್ಷ ವಯಸ್ಸಿನಲ್ಲೂ ತಂದೆಯಾಗಬಹುದು. ವಿಶೇಷ ಏನೆಂದರೆ ಈ ಸಮುದಾಯವು ಪಾಕಿಸ್ತಾನದ ಉಳಿದ ಸಮುದಾಯಗಳಿಗಿಂತ ಹೆಚ್ಚು ವಿದ್ಯಾವಂತರು ಎನ್ನಲಾಗಿದೆ.

Edited By : Nagesh Gaonkar
PublicNext

PublicNext

03/04/2022 06:55 pm

Cinque Terre

125.42 K

Cinque Terre

8