ಆಗ್ರಾ: ಕೃಷಿ ಕೆಲಸಕ್ಕಾಗಿ ಹೊಲಕ್ಕೆ ತೆರಳುತ್ತಿದ್ದ ಮಹಿಳೆ ರಲ್ವೈ ಹಳಿ ತುಂಡಾಗಿದ್ದನ್ನು ಗಮನಿಸಿದ್ದಾರೆ. ಹಳಿಗೆ ಸಮೀಪವೇ ಇದ್ದ ತಮ್ಮ ಮನೆಗೆ ಹೋಗಿ ಕೆಂಪು ಸೀರೆ ತಂದು ಅದನ್ನು ಹಳಿಗೆ ಅಡ್ಡ ಕಟ್ಟಿ ಬರುತ್ತಿದ್ದ ರೈಲು ನಿಲ್ಲಿಸಿದ್ದಾರೆ. ಈ ಮೂಲಕ ಸಾವಿರಾರು ಜನರ ಅಮೂಲ್ಯ ಜೀವ ಉಳಿಸಿದ್ದಾರೆ.
ಉತ್ತರ ಪ್ರದೇಶದ ಆಗ್ರಾ ಸಮೀಪದ ಎಟಾ ಎಂಬಲ್ಲಿ ಈ ಘಟನೆ ನಡೆದಿದ್ದು ಓಮವತಿ ಎಂಬ ಮಹಿಳೆಯ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹೊಲಕ್ಕೆ ತೆರಳುವಾಗ ಓಮವತಿ ಅವರು ಹಳಿ ತುಂಡಾಗಿದ್ದನ್ನು ಕಂಡು ತಕ್ಷಣ ಈ ಕೆಲಸ ಮಾಡಿದ್ದಾರೆ. ಎಟಾದಿಂದ ದುಂಡಾಲಾ ಕಡೆಗೆ ಹೊರಟಿದ್ದ ಪ್ಯಾಸೆಂಜರ್ ರೈಲಿನ ಸಿಬ್ಬಂದಿ ಹಳಿ ಮೇಲೆ ಕೆಂಪು ಬಟ್ಟೆ ಇರುವುದನ್ನು ಕಂಡು ಕೂಡಲೇ ಎಮರ್ಜೆನ್ಸಿ ಬ್ರೇಕ್ ಹಾಕಿದ್ದಾರೆ. ನಾನು ಹಳಿ ಪಕ್ಕದಲ್ಲೇ ವಾಸಿಸುತ್ತಿದ್ದೇನೆ. ಹೀಗಾಗಿ ಕೆಂಪು ಬಟ್ಟೆ ತೋರಿಸಿದರೆ ರೈಲು ನಿಲ್ಲುತ್ತದೆ ಎಂಬುದು ನನಗೆ ಗೊತ್ತು. ಹಳಿ ತುಂಡಾಗಿದ್ದನ್ನು ನೋಡಿ ಕೂಡಲೇ ಕೆಂಪು ಬಟ್ಟೆಯನ್ನು ಹಳಿಗೆ ಅಡ್ಡಲಾಗಿ ಕಟ್ಟಿದ್ದೇನೆ ಎನ್ನುತ್ತಾರೆ ಓಮವತಿ. ಸದ್ಯ ಇವರ ಕಾರ್ಯಕ್ಕೆ ರೈಲು ಅಧಿಕಾರಿಗಳು ಅಭಿನಂದಿಸಿದ್ದಾರೆ.
PublicNext
01/04/2022 06:10 pm