ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ಚಾಲಕನೋರ್ವ ಸಾವಿನಲ್ಲೂ ಸಾರ್ಥಕತೆಯನ್ನ ತೋರಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ 108 ಆ್ಯಂಬುಲೆನ್ಸ್ ಚಾಲಕನ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಿ.ವಡಿವೇಲು (42) ನೇತ್ರದಾನದ ಜೊತೆಗೆ ದೇಹದಾನ ಮಾಡಿದ್ದಾರೆ. ವಡಿವೇಲು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕುಟುಂಬ ಸದಸ್ಯರ ಅನುಮತಿ ಮೇರೆಗೆ ಮತ್ತು ವಡಿವೇಲು ಅವರ ಇಚ್ಛೆಯಂತೆ ನೇತ್ರ ಮತ್ತು ದೇಹವನ್ನು ದಾನ ಮಾಡಲಾಗಿದೆ.
ವಡಿಮೇಲು ಅವರ ಮೃತದೇಹವನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ನೀಡಿ ಮಾನವೀಯತೆ ತೋರಿದ್ದಾರೆ. ಇನ್ನು ಆ್ಯಂಬುಲೆನ್ಸ್ ಡ್ರೈವರ್ ಡಿ ವಡಿವೇಲು ಅವರ ಈ ಸಂಕಲ್ಪಕ್ಕೆ ಕೊರೊನಾ ಸಂಕಷ್ಟವೇ ಕಾರಣ ಅನ್ನೋದು ವಿಶೇಷ.
PublicNext
30/03/2022 11:55 am