ವಾಷಿಂಗ್ಟನ್: ಗುಜರಾತಿ ಜಾನಪದ ಗಾಯಕಿ ಗೀತಾ ಬೆನ್ ರಬರಿ ಅವರು ಅಮೆರಿಕದ ಜಾರ್ಜಿಯಾದಲ್ಲಿ ತಮ್ಮ ಸಂಗೀತ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಅವರು ರಷ್ಯಾ ದಾಳಿಯಿಂದ ತತ್ತರಿಸಿ ಹೋಗಿರುವ ಉಕ್ರೇನ್‌ಗಾಗಿ ನಿಧಿ ಸಂಗ್ರಹಿಸಲು ಆಯೋಜಿಸಲಾಗಿತ್ತು.
ಸೂರತ್ ಲೆಯುವಾ ಪಟೇಲ್ ಸಮಾಜ (ಎಸ್‌ಎಲ್‌ಪಿಎಸ್) ಆಯೋಜಿಸಿದ್ದ ಕಾರ್ಯಕ್ರಮದಿಂದ ಉಕ್ರೇನ್‌ನ ಜನರಿಗೆ ಸುಮಾರು 2.28 ಕೋಟಿ ರೂ. ಸಂಗ್ರಹಿಸಲು ಸಾಧ್ಯವಾಯಿತು. ಗಾಯಕಿ ರಾಬರಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ವೇದಿಕೆ ಮೇಲೆ ಅಮೆರಿಕನ್ ಡಾಲರ್‌ಗಳು ರಾಶಿ ರಾಶಿಯಾಗಿ ಬಿದ್ದಿರುವುದನ್ನು ಕಾಣಬಹುದಾಗಿದೆ.
PublicNext
29/03/2022 09:13 am