ಮಲೇಷ್ಯಾ: ಹೆಣ್ಣುಮಕ್ಕಳಿಗೆ ತನ್ನ ಗಂಡ ಶ್ರೀರಾಮನಂತಿರಬೇಕು. ಆತ ಯಾರನ್ನೂ ಕಣ್ಣೆತ್ತಿ ನೋಡಲೇಬಾರದು. ಆತ ನನ್ನವನೇ ಅನ್ನೋ ಪ್ರೀತಿ ಇರುತ್ತದೆ. ಆದರೆ ಮಲೇಷ್ಯಾದ ಜೀವದ ಗೆಳತಿಯರಿಬ್ಬರು ಇಬ್ಬರಿಗೂ ಒಬ್ಬನೇ ಗಂಡು ಬೇಕು. ಯಾರಿದ್ದೀರಾ ಅಂತಲೇ ಫೇಸ್ ಬುಕ್ ನಲ್ಲಿ ಕೇಳುತ್ತಿದ್ದಾರೆ.
ಫೇಸ್ ಬುಕ್ ನಲ್ಲಿ ಬರೆದುಕೊಂಡ ಗೆಳೆತಿಯರಲ್ಲಿ ಒಬ್ಬಳಿಗೆ 31 ವರ್ಷ. ಈಕೆಗೆ ಮದುವೆ ಆಗಿದೆ. ಒಂದು ಮಗು ಕೂಡ ಇದೆ. ಆದರೆ ಗಂಡ ತೀರಿ ಹೋಗಿದ್ದಾನೆ. ಮತ್ತೋರ್ವ ಹುಡುಗಿಗೆ 27 ವರ್ಷ ವಯಸ್ಸಾಗಿದೆ. ಈಕೆ ಸ್ವತಃ ಲಾಂಡ್ರಿ ಇಟ್ಟುಕೊಂಡಿದ್ದಾಳೆ.
ಇವರು ಒಟ್ಟಿಗೆ ನಿರ್ಧಾರ ಮಾಡಿದ್ದರು, ತಾವೂ ಒಬ್ಬನನ್ನೇ ಮದುವೆ ಆಗಲು ನಿರ್ಧರಿಸಿದ್ದೇವೆ. ಯಾರಾದರ ಇದ್ರೇ ಮುಂದೆ ಬನ್ನಿ, ನಾವು ಮದುವೆ ಆಗಲು ರೆಡಿ ಅಂತಲೇ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
PublicNext
25/03/2022 12:01 pm