ಎಲ್ಲರೂ ವಿದ್ಯೆ ಕಲಿತಿರುತ್ತಾರೆ. ಆದ್ರೆ ವಿನಯ ಕೆಲವರಲ್ಲಿ ಮಾತ್ರ ಇರುತ್ತೆ. ಅನ್ನೋದಕ್ಕೆ ಈ ವಿಡಿಯೋ ಬೆಸ್ಟ್ ಉದಾಹರಣೆ.
ಗರ್ಭಿಣಿಯೊಬ್ಬಳು ತನ್ನ ತಳ್ಳುವ ಗಾಡಿ ಮೂಲಕ ಹಣ್ಣು ಮಾರಲು ಹೋಗುತ್ತಿದ್ದಾಳೆ. ತನ್ನ ಇನ್ನೊಂದು ಮಗು ಕೂಡ ತಳ್ಳುವ ಗಾಡಿ ಮೇಲೆ ಮಲಗಿದೆ. ಈ ನಡುವೆ ಆಕೆ ಅದರ ಸಮೇತ ರಸ್ತೆ ದಿಬ್ಬವನ್ನು ದಾಟಬೇಕಿದೆ. ಆದರೂ ಆಕೆಯ ಸಹಾಯಕ್ಕೆ ಅಕ್ಕಪಕ್ಕ ಹಾದು ಹೋದ ಸ್ಥಳೀಯರು ಬರೋದಿಲ್ಲ. ಆದ್ರೆ ಅಲ್ಲಿಯೇ ಇದ್ದ ಇಬ್ಬರು ಶಾಲಾ ಮಕ್ಕಳು ಈಕೆಯ ಸಹಾಯಕ್ಕೆ ಬಂದಿದ್ದಾರೆ. ತಳ್ಳುಗಾಡಿಯನ್ನು ಎಳೆದು ರಸ್ತೆ ದಿಬ್ಬ ದಾಟಿಸಿಕೊಟ್ಟಿದ್ದಾರೆ. ನಂತರ ನಿರಾಳಗೊಂಡ ಆ ಗರ್ಭಿಣಿ ತನಗೆ ಸಹಾಯ ಮಾಡಿದ ಪುಟಾಣಿಗಳಿಗೆ ಬಾಳೆ ಹಣ್ಣು ಕೊಟ್ಟು ಥ್ಯಾಂಕ್ಸ್ ಹೇಳಿದ್ದಾಳೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಎಲ್ಲರ ಹೃದಯ ಗೆದ್ದಿದೆ. ಮಾನವೀಯತೆಯ ಹೊಸ ಪಾಠವನ್ನು ಕಲಿಸಿಕೊಟ್ಟಿದೆ.
PublicNext
22/03/2022 04:52 pm