ದಾವಣಗೆರೆ: ಟ್ರೈನ್ ಏರಲು ಹೋದವನು ಕ್ಷಣಾರ್ಧದಲ್ಲಿ ಮಿಸ್ ಆಗಿದ್ರೆ ಪ್ರಾಣ ಕಳೆದುಕೊಳ್ಳುತ್ತಿದ್ದ ಇದ್ದ. ಆ ಸಮಯಕ್ಕೆ ಆಪತ್ಭಾಂಧವನಂತೆ ಬಂದ ಪೊಲಿಸ್ ಕಾನ್ಸ್ಟೇಬಲ್ ಒಬ್ಬರು ಪ್ರಯಾಣಿಕನ ಪ್ರಾಣ ಉಳಿಸಿದ್ದಾರೆ.
ದಾವಣಗೆರೆ ಸಿಟಿ ರೈಲ್ವೇ ಸ್ಟೇಷನ್ ನಲ್ಲಿ ಘಟನೆ ನಡೆದಿದೆ. ಚಲಿಸುತ್ತಿರುವ ಟ್ರೈನ್ ಹತ್ತಲು ಹೋಗಿ ಎಡವಿ ಬಿದ್ದ ಪ್ರಯಾಣಿಕನನ್ನ ಕಾನ್ಸ್ಟೇಬಲ್ ನಾಗರಾಜು ರಕ್ಷಿಸಿದ್ದಾರೆ. ತಮ್ಮ ಪ್ರಾಣವನನ್ನೂ ಲೆಕ್ಕಿಸದೇ ನಾಗರಾಜ್ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡಿರುವ ನಾಗರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರಾಜ್ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ.
PublicNext
19/03/2022 02:05 pm