ಚಾಮರಾಜನಗರ: ಹಾವೊಂದಕ್ಕೆ ಆಪರೇಷನ್ ಮಾಡಿ ಪ್ರಾಣ ಉಳಿಸಿರುವ ವಿಶೇಷ ಘಟನೆಯೊಂದು ಚಾಮರಾಜನಗರದ ಸೋಮವಾರಪೇಟೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆದಿದ್ದು, ಮೂರು ದಿನದ ಆರೈಕೆ ನಂತರ ನಾಗಪ್ಪನನ್ನು ಕಾಡಿಗೆ ಬಿಟ್ಟಿದ್ದಾರೆ.
ಸೋಮವಾರಪೇಟೆಯಲ್ಲಿ 4 ದಿನಗಳ ಹಿಂದೆ ಜಮೀನೊಂದರಲ್ಲಿ ಉಳುಮೆ ಮಾಡುವಾಗ ಹಾವು ಸಿಲುಕಿ ಗಾಯಗೊಂಡಿತ್ತು. ಈ ವೇಳೆ ಅದನ್ನು ರಕ್ಷಿಸಿದ ಉರಗ ಪ್ರೇಮಿ ಸ್ನೇಕ್ ಅಶೋಕ್ ಪಶು ಆಸ್ಪತ್ರೆಯಲ್ಲಿ ಡಾ.ಮೂರ್ತಿ ಎಂಬವರಿಂದ ಚಿಕಿತ್ಸೆ ಕೊಡಿಸಿದ್ದಾರೆ.
ಹಾವಿನ ದೇಹದ ಎರಡು ಕಡೆ ತುಂಡಾಗಿದ್ದನ್ನು ಹೊಲಿದು ಸೇರಿಸಲಾಗಿದ್ದು ಜೊತೆಗೆ ಮೂಳೆ ಮುರಿತವನ್ನು ಕಿರು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ. ಮೂರು ದಿನ ಸ್ನೇಕ್ ಅಶೋಕ್ ಆರೈಕೆಯಲ್ಲೇ ಇದ್ದ ನಾಗರಹಾವನ್ನು ಇಂದು ನಗರದ ಕರಿವರದರಾಜಸ್ವಾಮಿ ಬೆಟ್ಟಕ್ಕೆ ಬಿಟ್ಟು ಬರಲಾಗಿದೆ ಎಂದು ಸ್ನೇಕ್ ಅಶೋಕ್ ಮಾಹಿತಿ ಕೊಟ್ಟಿದ್ದಾರೆ.
PublicNext
04/03/2022 08:34 am