ಯುವಕನೋರ್ವ ಒಂದೇ ದಿನದಲ್ಲಿ ತ್ರಿವಳಿ ಸಹೋದರಿಯರನ್ನು ಮದುವೆಯಾದ ವಿಚಿತ್ರ ಪ್ರಸಂಗವೊಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆದಿದೆ.
ತ್ರಿವಳಿ ಸಹೋದರಿಯನ್ನು ಮದುವೆಯಾದ ಯುವಕ ಆಫ್ರಿಕಾದ ಕಾಂಗೋ ದೇಶದ ನಿವಾಸಿ ಲುವಿಜೋ ಎಂದು ಗುರುತಿಸಲಾಗಿದೆ. ತ್ರಿವಳಿ ಸಹೋದರಿಯರು ಲುವಿಜೊಗೆ ಏಕಕಾಲಕ್ಕೆ, ಒಟ್ಟಿಗೆ ಮದುವೆ ಮಾಡಿಕೊಳ್ಳುವ ಬಗ್ಗೆ ಏಕಕಾಲದಲ್ಲೇ ಪ್ರಸ್ತಾಪ ಮುಂದಿಟ್ಟಿದ್ದರು ಎಂದು ವರದಿಯಾಗಿದೆ.
ಲುವಿಜೊ ಮೂವರು ಸಹೋದರಿಯರನ್ನು ಒಟ್ಟಿಗೆ ಮದುವೆ ಆಗುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ತನ್ನ ಮೂರು ಮದುವೆಗಳ ಬಗ್ಗೆ, ಲುವಿಜೊ ಆಫ್ರಿಮ್ಯಾಕ್ಸ್ ಇಂಗ್ಲಿಷ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. "ನಾನು ಕನಸು ಕಾಣುತ್ತಿರುವಂತೆ ಭಾಸವಾಗುತ್ತಿದೆ. ಮೂವರು ಸಹೋದರಿಯರನ್ನು ಒಟ್ಟಿಗೆ ಮದುವೆಯಾಗಿದ್ದೇನೆ. ಸದ್ಯ ಮೂವರು ಹೆಂಡತಿಯರು ಕೂಡ ಈ ಮದುವೆಯಿಂದ ತುಂಬಾ ಸಂತೋಷವಾಗಿದ್ದಾರೆ" ಎಂದು ಲುವಿಜೋ ಹೇಳಿದ್ದಾರೆ.
PublicNext
03/03/2022 11:07 pm