ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಮ್ಮಿಗೆ ಮರುಮದುವೆ : ಪುತ್ರನ ಕಾರ್ಯಕ್ಕೆ ಮೆಚ್ಚುಗೆ

ಮುಂಬಯಿ : ಒಂಟಿ ಜೀವನ ಕಳೆಯುವುದು ದುಸ್ತರ ಎನ್ನುವುದು ಅನುಭವಿಗಳ ಮಾತು. ಜಂಟಿ ಬದುಕು ಒಂಟಿಯಾಗುತ್ತಿದ್ದಂತೆ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಸದ್ಯ ಇಲ್ಲೊಬ್ಬ ಪುತ್ರ ತನ್ನ ತಾಯಿ ಗಂಡನನ್ನು ಕಳೆದುಕೊಂಡು ಕ್ಯಾನ್ಸರ್ ನಿಂದ ಬಳಲಿ ಬೆಂದಿದ್ದನ್ನು ಗಮನಿಸಿ ಅವರ ಬದುಕು ಹಸನಾಗಿರಲೆಂದು ಮರು ಮದುವೆ ಮಾಡಿ ಸುದ್ದಿಯಾಗಿದ್ದಾರೆ.

ತಾಯಿ ಮದುವೆ ಮಾಡಿದ ಪುತ್ರ ಜಿಮೀತ್ ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಮಾಡಿದ್ದು ಹೀಗಿದೆ.

“ನನ್ನ ತಾಯಿ 44 ವರ್ಷದವರಾಗಿದ್ದಾಗ (2013) ಪತಿಯನ್ನು ಕಳೆದುಕೊಂಡರು.ಆಕೆಗೆ 2019 ರಲ್ಲಿ 3 ನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. 2 ವರ್ಷಗಳ ನಂತರ ಚೇತರಿಸಿಕೊಂಡರು. ಕ್ಯಾನ್ಸರ್ ಚಿಕಿತ್ಸೆಯಲ್ಲಿದ್ದಾಗ ಡೆಲ್ಟಾ ರೂಪಾಂತರಕ್ಕೆ ಒಳಗಾದರು.

ನನಗೆ ನೆನಪಿಲ್ಲದ ಸಮಯದಿಂದ ಅವರು ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ಹೆಚ್ಚಿನ ಸಮಯ, ನಾವು ಬೇರೆಡೆ ನಮ್ಮ ವೃತ್ತಿಯನ್ನು ಮುಂದುವರಿಸಿದ್ದರಿಂದ ಅವರು ಭಾರತದಲ್ಲಿ ಒಬ್ಬಂಟಿಯಾಗಿದ್ದರು. ಆದರೆ ಧೃತಿಗೆಡದ ನನ್ನ ತಾಯಿ ಸ್ವದೇಶದಲ್ಲಿಯೇ ಪ್ರೀತಿಯನ್ನು ಕಂಡುಕೊಂಡರು. ಅವಳು ಪ್ರೀತಿಸುವ ವ್ಯಕ್ತಿಯನ್ನು 52 ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ.

ಭಾರತದಲ್ಲಿ ನನ್ನ ತಲೆಮಾರಿನ ಎಲ್ಲಾ ಜನರಿಗೆ, ನೀವು ಒಬ್ಬ ಪೋಷಕರನ್ನು ಹೊಂದಿದ್ದರೆ, ಒಡನಾಟವನ್ನು ಕಂಡುಕೊಳ್ಳುವ ಅವರ ನಿರ್ಧಾರವನ್ನು ದಯವಿಟ್ಟು ಬೆಂಬಲಿಸಿ. ಎಲ್ಲಕ್ಕಿಂತ ಹೆಚ್ಚು ಪ್ರೀತಿ ಮತ್ತು ಮಾನಸಿಕ ಆರೋಗ್ಯ!” ಎಂದು ಬರೆದಿದ್ದಾರೆ.

ಜಿಮೀತ್, ತನ್ನ ತಾಯಿ ತನ್ನ ಪ್ರೇಮ ಸಂಬಂಧದ ಬಗ್ಗೆ ಹೇಳಿಕೊಂಡು ಇದೇ ಫೆಬ್ರವರಿ 14 ರಂದು ಮುಂಬಯಿಯಲ್ಲಿ ವಿವಾಹವಾಗಿದ್ದಾರೆ. ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.

Edited By : Nirmala Aralikatti
PublicNext

PublicNext

03/03/2022 01:29 pm

Cinque Terre

45.44 K

Cinque Terre

18

ಸಂಬಂಧಿತ ಸುದ್ದಿ