ನವದೆಹಲಿ: ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ 25 ಅಡಿ ಎತ್ತರದ ಗ್ರಿಲ್ನಲ್ಲಿ ಸಿಲುಕಿಕೊಂಡ ಬಾಲಕಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ರಕ್ಷಿಸಿದ್ದಾರೆ.
ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ 25 ಅಡಿಯ ಎತ್ತರದ ಗ್ರಿಲ್ನಲ್ಲಿ 8 ವರ್ಷದ ಬಾಲಕಿ ಸಿಲುಕಿಕೊಂಡಿದ್ದಳು. ಈ ಬಗ್ಗೆ ಮಾಹಿತಿಯನ್ನು ಸಿಐಎಸ್‌ಎಫ್ ಪಡೆಗೆ ನೀಡಲಾಗಿತ್ತು. ತಕ್ಷಣವೇ ಸಿಐಎಸ್‌ಎಫ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹರಸಾಹಸಪಟ್ಟು ಸುರಕ್ಷಿತ ಸ್ಥಳಕ್ಕೆ ಬಾಲಕಿಯನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪುಟ್ಟ ಹುಡುಗಿಯು ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಅಡಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಐಎಸ್‌ಎಫ್ ಸಿಬ್ಬಂದಿ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
28/02/2022 03:38 pm