ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್ ನಿಂದ ತವರಿಗೆ ಮರಳಿದ ಮನು: ಅಲ್ಲಿಂದ ಬಂದದ್ದು ಹೇಗೆ ಗೊತ್ತಾ...?

ದಾವಣಗೆರೆ: ಯುದ್ಧ ನಡೆಯುತ್ತಿರುವ ಉಕ್ರೇ‌ನ್ ನಲ್ಲಿ ಎಂಬಿಬಿಎಸ್ ಓದುತ್ತಿದ್ದ ದಾವಣಗೆರೆ ಜಿಲ್ಲೆಯ ದ್ಯಾಮವ್ವನಹಳ್ಳಿಯ ಎಂಬಿಬಿಎಸ್ ವಿದ್ಯಾರ್ಥಿ ಪಾರಾಗಿ ಬಂದಿದ್ದಾರೆ.

ಉಕ್ರೇನ್ ನಲ್ಲಿ ಯುದ್ಧದ ವಾತಾವರಣದ ಸೂಚನೆ ಗೊತ್ತಾಗುತ್ತಿದ್ದಂತೆಯೇ ಪರಿಸ್ಥಿತಿ ಅರಿತು ತವರಿಗೆ ಆಗಮಿಸಿದ್ದಾರೆ‌.

ದಾವಣಗೆರೆ ತಾಲೂಕಿನ ದ್ಯಾಮವ್ವನಹಳ್ಳಿಯ ಮನು ವಾಪಸ್ ಆದ ವಿದ್ಯಾರ್ಥಿ. ಮನು ಉಕ್ರೇನ್ ನ ಚರ್ನಿವಿಸ್ತಿ ನಲ್ಲಿ ವಾಸವಾಗಿದ್ದರು‌. ಪರಿಸ್ಥಿತಿ ಅರಿತು ಮೊದಲೇ ವಿಮಾನ ಬುಕ್ ಮಾಡಿದ್ದರು.

ಫೆ.22 ರಂದು ಉಕ್ರೇನ್ ನಿಂದ ಹೊರಟು ತವರಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಫೆ.14 ರಂದೇ ಯುದ್ಧದ ಬಗ್ಗೆ ಅಲ್ಲಿನ ರಾಯಭಾರಿಗಳು ಮಾಹಿತಿ ನೀಡಿದ್ದರು‌. ಭಾರತಕ್ಕೆ ವಾಪಸ್ ಹೋಗುವವರು ಹೋಗುವಂತೆ ಸೂಚಿಸಿದ್ದರು. ಈ ಬಗ್ಗೆ ಮನೆಯಲ್ಲಿ ಹೇಳಿದ್ದೆ. ಮನೆಯವರು ವಾಪಸ್ ಬರುವಂತೆ ಹೇಳಿದ್ದರು. ಹೀಗಾಗಿ ಸುರಕ್ಷಿತವಾಗಿ ಬಂದಿದ್ದೇನೆ. ಆದರೆ, ಉಳಿದವರು ಏನೂ ಆಗಲ್ಲ ಅಂದುಕೊಂಡು ಅಲ್ಲೇ ಉಳಿದರು ಎಂದು ಹೇಳಿದ್ದಾರೆ‌.

ಈಗ ಫ್ಲೈಟ್ ಬಂದ್ ಆಗಿ ನಮ್ಮವರಿಗೆ ಸಮಸ್ಯೆಯಾಗಿದೆ. ಸದ್ಯ ಉಕ್ರೇನ್ ನಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ನಮ್ಮವರು ಸುರಕ್ಷಿತವಾಗಿ ಭಾರತಕ್ಕೆ ಬರಲಿ ಎಂದು ಯುವಕ ಮನು ಪ್ರಾರ್ಥಿಸಿದ್ದಾರೆ.

Edited By : Nagesh Gaonkar
PublicNext

PublicNext

26/02/2022 02:58 pm

Cinque Terre

36.56 K

Cinque Terre

0

ಸಂಬಂಧಿತ ಸುದ್ದಿ