ರಷ್ಯಾ: ಇಲ್ಲಿಯ ಗ್ಯಾಲರಿಯಲ್ಲಿ 7.4 ಕೋಟಿಯ ಮೌಲ್ಯದ ವಿಶೇಷ ಪೇಂಟಿಂಗ್ ಇತ್ತು. ಈ ಪೇಂಟಿಂಗ್‌ಗೆ ಸೆಕ್ಯುರಿಟಿ ಗಾರ್ಡ್ ಪೆನ್ನಿನಿಂದ ಕಣ್ಣು ಬಿಡಿಸಿ ಬಿಟ್ಟಿದ್ದ. ಅದೇ ಈಗಲೂ ಚರ್ಚೆ ಆಗುತ್ತಿದೆ. ಆದರೆ ಹೀಗೆ ಕಣ್ಣು ಬಿಡಿಸಲು ಕಾರಣ ಏನೂ ಗೊತ್ತೇ ? ಬನ್ನಿ, ಹೇಳ್ತಿವಿ.
ಅಮ್ಯೂಲ್ಯ ಪೇಂಟಿಂಗ್ ಮೇಲೆ ಕಣ್ಣು ಬಿಡಿಸಿದ್ದ ಸೆಕ್ಯುರಿಟಿ ಗಾರ್ಡ್ ಹೆಸರು ಅಲೆಕ್ಸಾಂಡರ್ ವಾಸಲೀವ್. 63 ವರ್ಷದ ಮಾಜಿ ಯೋಧ ಬೇರೆ. ಆದರೆ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿರೋ ಅಮೂಲ್ಯ ಕಲಾಕೃತಿ ಕಂಡ್ರೆ ಅದೇನೋ ಬೇಸರ. ಇಲ್ಲಿರೋ ಹುಡುಗಿಯರಿಗೆ ಕಣ್ಣೇ ಇಲ್ಲ. ಸೌಂದರ್ಯವೂ ಇಲ್ಲ. ಬಾಯಿ ಇಲ್ಲವೇ ಇಲ್ಲ. ಹೀಗೆ ಅಂದು ಕೊಂಡು ಬೇಸರಪಟ್ಟಿದ್ದ
ಈ ಸೆಕ್ಯುರಿಟಿ ಗಾರ್ಡ್‌ಗೆ.
ಈ ಒಂದು ಫೀಲ್ ನಲ್ಲಿಯೇ ಇದ್ದ ಮಾಜಿ ಯೋಧನಿಗೆ, ಚಿತ್ರಗಳಲ್ಲಿಯೇ ಇದ್ದ ಟಿನೇಜರ್ಸ್ 'ನೀನು ಇಲ್ಲಿಯೇ ಕೆಲಸ ಮಾಡೋದು ಅಲ್ಲವೇ ? ನೀನು ನಮಗೆ ಕಣ್ಣುಗಳನ್ನ ಬಿಡಿಸು ಅಂದ್ರಂತೆ. ಅದಕ್ಕೇನೆ ಈ ಅಜ್ಜ ಅಲೆಕ್ಸಾಂಡರ್ ಈ ವಿಶೇಷ ಕಲಾಕೃತಿ ಮೇಲೆ ಕಣ್ಣು ಬಿಡಿಸಿ ಕೆಂಗಣ್ಣಿಗೆ ಗುರಿ ಆಗಿದ್ದಾರೆ.
PublicNext
12/02/2022 02:31 pm