ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಳಿ ಬಾರದ ಲೋಕಕ್ಕೆ ಹಾರಿತು ಸಪ್ತಸ್ವರಗಳ ಗಾನಕೋಗಿಲೆ

ಪಬ್ಲಿಕ್ ನೆಕ್ಸ್ಟ್ ಗೀತನಮನ : ಕೇಶವ ನಾಡಕರ್ಣಿ

" ಏಯ್ ಮೇರೆ ವತನ್ ಕೆ ಲೋಗೋಂ ಜರಾ ಆಂಖ ಮೇ ಭರಲೋ ಪಾನಿ '' ಲತಾ ಮಂಗೇಶ್ಕರ್ ಅವರ ಈ ದೇಶ ಭಕ್ತಿ ಗೀತೆ ಕೇಳಿದ ಪ್ರಧಾನಿ ನೆಹರೂ, " ಬೇಟಿ ತೂನೆ ಮುಝೆ ರುಲಾದಿಯಾ '' ಎಂದು ಗದ್ಗಗಧಿತರಾಗಿದ್ದರಂತೆ.

ಹೌದು ಆರೇಳು ದಶಕಗಳ ಕಾಲ ನಿರಂತರವಾಗಿ ಹಾಡಿ ದಣಿದ ಭಾರತದ ಕೋಗಿಲೆ ಇಂದು ಶಾಶ್ವತವಾಗಿ ಮೌನವಾಯಿತು, "

ಲತಾ ದೀದಿ ಅಗಲಿಕೆಯಿಂದ ಭಾರತೀಯ ಚಿತ್ರರಂಗ.... ಭಕ್ತಿಸಂಗೀತ ಹಾಗೂ ಗಝಲ್ ಕ್ಷೇತ್ರ ಇಂದು ನಿಜಕ್ಕೂ ಬಡವಾಯಿತು. ಸಪ್ತಸ್ವರಗಳ ಸಾಮ್ರಾಜ್ಞೆ ಲತಾಮಂಗೇಶ್ಕರ್ ಇನ್ನಿಲ್ಲ ಎಂದು ಹೇಳಲು.... ಕೇಳಲು ಆಗುವ ನೋವು ಅಷ್ಟಿಷ್ಟಲ್ಲ. ಆದರೆ 92 ರ ವಯೋಮಾನದ ಮಹಾನ್ ಚೇತನದ ಅಗಲಿಕೆ, ವಾಸ್ತವಿಕ ಕಟು ಸತ್ಯ.

ಸೆಪ್ಟೆಂಬರ್ 28, 1929 ರಂದು ಇಂದೋರನ ಮರಾಠಿ ಕುಟುಂಬದಲ್ಲಿ ಜನಿಸಿದ ಹೇಮಾ ಎಂಬ ಬಾಲೆ ಐದು ವಷಗಳ ನಂತರ ಲತಾ ಮಂಗೇಶ್ಕರ ಆದರು. ಬಡತನದ ಕಾರಣ ಶಾಲೆ ಮೆಟ್ಟಿಲು ಹತ್ತಲಾಗಲಿಲ್ಲ. ಫೀ ಕೊಡದ ಕಾರಣಕ್ಕೆ ಸಹೋದರಿ ಆಶಾಳನ್ನು ಶಾಲೆಯಿಂದ ಹೊರಗೆ ಹಾಕಲಾಗಿತ್ತು.ಅದೇ ದಿನ " ನಾನೆಂದೂ ಶಾಲೆ ಮೆಟ್ಟಿಲು ತುಳಿಯುವದಿಲ್ಲ'' ಎಂದು ಶಪಥ ಮಾಡಿದರು.

ಶಾಲೆ ಮೆಟ್ಟಿಲು ತುಳಿಯ ಈ ಸ್ವರಸಾಮ್ರಾಜ್ಞೆಗೆ ನ್ಯೂಯಾಕ್ ಸೇರಿದಂತೆ 6 ವಿಶ್ವವಿದ್ಯಾಲಯಗಳು ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ್ದು ಒಂದು ಇತಿಹಾಸವೆ.

ಇಂದು ಉದಯೋನ್ಮುಖ ಗಾಯಕರ ಆರಾಧ್ಯ ದೈವವಾಗಿದ್ದ ಲತಾಜಿ ಅವರಿಗೆ ಬಂದ ಪ್ರಶಸ್ತಿಗಳು ಅಗಣಿತ. 1942 ರಲ್ಲಿ ಲತಾಜಿ ಅವರು ಹಿನ್ನೆಲೆ ಗಾನಯಾನ ಆರಂಭವಾಯಿತು. ಆಗ ಖ್ಯಾತಿಯ ಉತ್ತುಂಗದಲ್ಲಿದ್ದ ಗಾಯಕಿ ನೂರ್ ಜಹಾನ್ ಜೊತೆ ಇವರ ಧ್ವನಿ ಹೋಲಿಸಿ, ಲತಾಜಿ ಧ್ವನಿ ತುಂಬಾ ತೆಳುವಾಗಿದೆ ಎಂದು ಅನೇಕ ಸಂಗೀತ ನಿರ್ದೇಶಕರು ಅವಕಾಶ ನೀಡಿರಲಿಲ್ಲ.

ಆದರೆ ಅದೆ ತೆಳುವಾದ ಧ್ವನಿ, ಮುಂದೆ " ಭಾರತ ರತ್ನ''ವಾಗಿ ಪ್ರತಿಧ್ವನಿಸಿತು. 1969 ರಲ್ಲಿ ಪದ್ಮಭೂಷಣ, 1999 ರಲ್ಲಿ ಪದ್ಮವಿಭೂಷಣ ಹಾಗೂ 2001 ರಲ್ಲಿ ಭಾರತ ರತ್ಮ ಪ್ರಶಸ್ತಿಗೆ ಭಾಜನರಾಗಿದ್ದರು. ದಾದಾಸಾಹೇಬ್ ಫಾಲ್ಕೆ, ಫಿಲ್ಮಫೇರ್ ದಂತ ಸಾಲು ಸಾಲು ಪ್ರಶಸ್ತಿಗಳು ಇವರ ಮುಡಿಗೇರಿ ತಮ್ಮ ಗೌರವ ಹೆಚ್ಚಿಸಿಕೊಂಡಿದ್ದವು.

ಲತಾಜಿ ಅವರ ಕನ್ನಡದ '' ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ '' ಚಿತ್ರದ " ಬೆಳ್ಳನ ಬೆಳಗಾಯಿತು '' ಇಂದಿಗೂ ಅಷ್ಟೇ ಪ್ರಸಿದ್ಧ. ದೇಶದ 20 ಭಾಷೆಯಗಳಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಖ್ಯಾತಿ ಇವರಿಗಿದೆ. ಅದರಲ್ಲಿ 20 ಸಾವಿರ ಸೋಲೊ, 30 ಸಾವಿರ ಯುಗಳ ಗೀತೆಗಳಾಗಿವೆ.

ಸೋಲೋಗಳಲ್ಲಿ " ಮೊಗಲ್ ಎ ಆಜಮ್ '' ಚಿತ್ರದ " ಪ್ಯಾರ ಕಿಯಾ ತೋ ಡರ್ನಾ ಕ್ಯಾ....'' ಓ ಕೌನ್ ಥಿ '' ಚಿತ್ರದ... " ಲಗಜಾ ಗಲೆ ಏ ಹಸಿ ರಾತ್ '' ....." ಸತ್ಯಂ ಶಿವಂ ಸುಂದರಂ '' ಟೈಟಲ್ ಸಾಂಗ್.....ರಫಿ ಜೊತೆಗಿನ " ಪಾರಸ್ ಮಣಿ'' ಚಿತ್ರದ " ವೊ ಜಬ್ ಯಾದ್ ಆಯೆ '' ಗೀತ್ ಚಿತ್ರದ " ಆಜಾ ತುಝ ಕೊ ಪುಕಾರೆ '' ಹಾಡುಗಳು ಇಂದಿಗೂ ಜನಪ್ರಿಯ.

ಎಸ್ ಪಿ ಬಾಲಸುಬ್ರಮಣ್ಯಂ ಜೊತೆಗಿನ '' ಏಕ್ ದೂಜೆ ಕೇ ಲಿಯೇ " ಚಿತ್ರದ " ತೇರೆ ಮೇರೆ ಬೀಚ ಮೇ ''.... '' ಮೈನೆ ಪ್ಯಾರ್ ಕಿಯಾ '' ಚಿತ್ರದ '' ದಿಲ್ ದೀವಾನಾ ದಿಲ್ ಸಜನಾಕೆ ''... " ಹಮ್ ಆಪ್ ಹೈ ಕೌನ್ '' ಚಿತ್ರದ '' ದೀದಿ ತೇರಾ ದೇವರ್ ದಿವಾನಾ '' ಹಾಡುಗಳಂತೂ ಯುವ ಪ್ರೇಮಿಗಳನ್ನು ಹುಚ್ಚಾಗಿಸಿದ್ದವು.

"ರಾಮ್ ತೇರಿ ಗಂಗಾ ಮೈಲಿ'' ಹಾಡುಗಳಂತೂ ಇತಿಹಾಸ ಸೃಷ್ಟಿಸಿದ್ದವು. ಲತಾಜಿ ಹಾಡುಗಳನ್ನು ಬರಹದಲ್ಲಿ ವರ್ಣಿಸಲಸಾಧ್ಯ. ಅವುಗಳನ್ನು ಕೇಳಿಯೇ ಆನಂದಿಸಬೇಕು

ಕಿಶೋರ್ ಕುಮಾರ್ ಜೊತೆಗಿನ ''ಆರಾಧನಾ'' ಚಿತ್ರದ " ಕೋರಾ ಕಾಗಝ ಥಾ ಯೇ ಮನ ಮೇರಾ''.... ಮುಕೇಶ್ ಜೊತೆಗಿನ " ಮಿಲನ್'' ಚಿತ್ರದ.... '' ಸಾವನ್ ಕಾ ಮಹೀನಾ ಪವನ್ ಕರೆ ಸೋರ್ '' ಹಾಗೂ " ಶೋರ್ '' ಚಿತ್ರದ " ಇಕ್ ಪ್ಯಾರ್ ಕಾ ನಗಮಾ '' ಗೀತೆಗಳು ಅಜರಾಮರ.

.ಅತ್ಯಂತ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ 1974 ರಲ್ಲಿ ಗಿನ್ನೀಸ್ ಬುಕ್ ಆಫ್ ರಿಕಾರ್ಡ್ ಸೇರಿತು. ಇವರ ದೈವಭಕ್ತಿ ಎಷ್ಟಿತ್ತೆಂದರೆ ರಿಕಾರ್ಡಿಂಗ್ ಸ್ಟುಡಿಯೋ ಪ್ರವೇಶಿಸುವಾಗ ತಮ್ಮ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬರುತ್ತಿದ್ದರಂತೆ.

ಸಾಧನೆಗಳ ಮೇರು ಪರ್ವತಾಗಿದ್ದರೂ ವಿವಾದಗಳಿಂದ ದೂರವಾಗಲು ಸಾಧ್ಯವಾಗಲಿಲ್ಲ ಈ ಗಾನಕೋಗಿಲೆಗೆ. ಅದೇ ಕಾಲಘಟ್ಟದಲ್ಲಿ ಹಿನ್ನೆಲೆ ಗಾಯಕರಾಗಿ ಬರಲು ಯತ್ನಿಸುತ್ತಿದ್ದ ಹೇಮಲತಾ, ಸುಮನ್ ಕಲ್ಯಾಣಪುರ ಅವರನ್ನು ಲತಾಜಿ ತುಳಿದರು ಎಂಬ ಅಪವಾದವೂ ಇದೆ. ಸಣ್ಣ ಕಾರಣಕ್ಕಾಗಿ ರಫಿ ಜೊತೆ ಮಾತು ಬಿಟ್ಟಿದ್ದರಂತೆ. ಆದರೆ ಈಗ ಎಲ್ಲವೂ ನಗಣ್ಯ.

ಲತಾಜಿ ಇಂಪಾದ ಕಂಠವೆ " ಸತ್ಯಂ'

ಭಕ್ತಿಗೀತಗಳೇ " ಶಿವಂ'' ....

ಪ್ರೇಮಾರಾಧನೆ ಹಾಡುಗಳೇ " ಸುಂದರಂ'' .....

ದೇಶ ವಿದೇಶಗಳ ಚಿತ್ರ ಪ್ರೇಮಿಗಳ ಪರವಾಗಿ ಇದೋ ನಿಮಗೆ ಅಶ್ರುತರ್ಪಣ, ಕೋಟಿ ಕೋಟಿ ನಮನ.

Edited By : Shivu K
PublicNext

PublicNext

06/02/2022 11:13 am

Cinque Terre

144.33 K

Cinque Terre

23

ಸಂಬಂಧಿತ ಸುದ್ದಿ