ಮುಂಬೈ: ಹೆಮ್ಮಾರಿ ಕೊರೊನಾಗೆ ಅಣ್ಣ ಬಲಿಯಾದ ಹಿನ್ನೆಲೆಯಲ್ಲಿ ವಿಧವೆಯಾದ ಅತ್ತಿಗೆಗೆ ಯುವಕನೋರ್ವ ಬಾಳು ಕೊಟ್ಟಿರುವ ಘಟನೆ ಮಹಾರಾಷ್ಟ್ರದ ಅಹಮದ್‌ನಗರದ ಅಕೋಲೆ ತಾಲೂಕಿನಲ್ಲಿ ನಡೆದಿದೆ.
ಅಕೋಲೆ ತಾಲೂಕಿನ ಧೋಕ್ರಿಯ 31 ವರ್ಷದ ನೀಲೇಶ್ ಶೇಟೆ ಕೋವಿಡ್‍ನಿಂದಾಗಿ ಕಳೆದ ವರ್ಷ ಆಗಸ್ಟ್‌ನಲ್ಲಿ ಸಾವನ್ನಪ್ಪಿದ್ದರು. ಈತನ ಸಾವಿನಿಂದಾಗಿ 19 ತಿಂಗಳ ಮಗಳು ಹಾಗೂ ಪತ್ನಿ 23 ವರ್ಷದ ಪೂನಂ ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಇದರಿಂದಾಗಿ ಅತ್ತಿಗೆಯ ಕೈ ಹಿಡಿಯಲು ನೀಲೇಶ್ ಸಹೋದರ 26 ವರ್ಷದ ಸಮಾಧಾನ್ ಮುಂದೆ ಬಂದಿದ್ದ. ಆತನ ನಿರ್ಧಾರಕ್ಕೆ ಗ್ರಾಮದ ಹಿರಿಯರು, ಎರಡು ಕುಟುಂಬದವರು ಮದುವೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ಕಳೆದ ಎರಡು ದಿನಗಳ ಹಿಂದೆ ಸರಳ ಮದುವೆ ಸಮಾರಂಭ ನಡೆದಿದೆ. ಅಕೋಲಾದ ಖಂಡೋಬಾ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆದಿದ್ದು, ಸಮಾಧಾನ್ ಇದೀಗ ಪೂನಂ ಜೊತೆ ಸಪ್ತಪದಿ ತುಳಿದಿದ್ದಾರೆ.
PublicNext
05/02/2022 04:36 pm