ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ರಿಯಲ್ ಲೈಫ್ 'ವಿಕ್ಕಿ ಡೋನರ್'‌ಗೆ 129 ಮಕ್ಕಳು !

ಈ ವ್ಯಕ್ತಿಗೆ 129 ಮಕ್ಕಳು. ವಯಸ್ಸು 66 ವಯಸ್ಸು. ವೃತ್ತಿಯಲ್ಲಿ ಶಿಕ್ಷಕ. ಗಣಿತ ಶಿಕ್ಷಕ. ಇಳಿ ವಯಸ್ಸಿನ ಈ ವ್ಯಕ್ತಿಗೆ ಇನ್ನೂ 9 ಮಕ್ಕಳು ಹುಟ್ಟೊದಿದೆ.

ಹೌದು ! ಯುರೋಪ್ ಮೂಲದ ಈ ಹಿರಿಯ ವ್ಯಕ್ತಿಯ ಹೆಸರು ಕ್ಲೈವ್ ಜೋನ್ಸ್. ವಿಶ್ವದ ಆರೋಗ್ಯವಂತ ಮತ್ತು ಸಮೃದ್ಧ ವೀರ್ಯ ಇರೋ ವ್ಯಕ್ತಿ ಅಂತಲೇ ಚಿರಪರಿಚಿತ.

ನಿಜ,ಈ ಹಿರಿಯ ಗಣಿತ ಮೇಷ್ಟ್ರ ವೀರ್ಯ ಪಡೆದು 129 ಮಕ್ಕಳು ಹುಟ್ಟಿದ್ದಾರೆ. ಆರೋಗ್ಯವಂತ ಆ ಮಕ್ಕಳ ಫೋಟೋ ನೋಡಿ ಮೇಷ್ಟ್ರು ಖುಷಿ ಪಡ್ತಾನೇ ಇದ್ದಾರೆ.

ಅಂದ್ಹಾಗೆ ಈ ಗಣಿತ ಮೇಷ್ಟ್ರಿಗೆ ವೀರ್ಯದಿಂದ 9 ಜನ ಗರ್ಭಿಣಿಯಾಗಿದ್ದಾರೆ. ಅಲ್ಲಿಗೆ ಒಟ್ಟು 138 ಮಕ್ಕಳು ಹುಟ್ಟಿದಂತಾಗುತ್ತದೆ. ತಮ್ಮ ವೀರ್ಯದಿಂದ ಒಟ್ಟು 150 ಮಕ್ಕಳನ್ನ ಹುಟ್ಟಿಸಬೇಕು ಅನ್ನೋ ಗುರಿಯನ್ನೂ ಜೋನ್ಸ್ ಹೊಂದಿದ್ದಾರೆ. ಅದು ಆಗ್ತದೋ ಇಲ್ಲವೋ ಗೊತ್ತಿಲ್ಲ.

ಜೋನ್ಸ್ ರಿಯಲ್ ಕಥೆಯಿಂದ ಸ್ಪೂರ್ತಿ ಪಡೆದರೋ ಇಲ್ವೋ ಗೊತ್ತಿಲ್ಲ. ಆದರೆ ಆಯುಷ್ಮಾನ್ ಖುರಾನಾ ಅಭಿನಯದ ವಿಕ್ಕಿ ಡೋನರ್ ಸಿನಿಮಾದ ಕಥೆ ಕೂಡ ಇದೇ ರೀತಿಯ ವೀರ್ಯದಾನದ ಮೇಲೆ ಇತ್ತು.

Edited By :
PublicNext

PublicNext

29/01/2022 04:24 pm

Cinque Terre

27.1 K

Cinque Terre

1

ಸಂಬಂಧಿತ ಸುದ್ದಿ