ಭುವನೇಶ್ವರ: ಪ್ರೀತಿ ಯಾವಾಗ ಬೇಕಾದ್ರು ಹುಟ್ಟಬಹುದು. ಮನಸ್ಸುಗಳು ಒಂದಾಗಿ ನಂತರ ಅದು ಪ್ರೀತಿಯಾಗಿ ಚಿಗುರೊಡೆಯುತ್ತದೆ. ಎಷ್ಟೋ ಜನರು ಪ್ರೀತಿಯಲ್ಲಿ ಬಿದ್ದವರಿದ್ದಾರೆ. ಅದರೆ ಅದರಲ್ಲಿ ಕೆಲವೇ ಪ್ರೀತಿಗಳು ಮಾತ್ರ ಒಂದಾಗಿ ಸುಖವಾಗಿ ಬಾಳುತ್ತಾರೆ. ಇನ್ನು ಕೆಲವು ಸುಖ ಸುಮ್ಮನೆಯಂತೆಯೇ ನಾಟಕವಾಡಿ ದೂರ ದೂರವಾಗುತ್ತಾರೆ. ಅಂದಹಾಗೆಯೇ ಇಲ್ಲೊಂದು ಜೋಡಿಯ ಪ್ರೀತಿಯ ಬಗ್ಗೆ ಹೇಳಲೇ ಬೇಕು.
ಒಡಿಶಾದ ಬಲಗಿರ್ ಜಿಲ್ಲೆಯ ಮಂದಮಹುಲ್ ಗ್ರಾಮದ ದಿಲೀಪ್ ತಂಡಿ ಮತ್ತು ಅದೇ ಜಿಲ್ಲೆಯ ಬುರುಡಾ ಗ್ರಾಮದ ಚಾಂದಿನಿ ಬಾಘ್ ನಡುವೆ ಮಿಸ್ ಕಾಲ್ ಮೂಲಕ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ ದಿಲೀಪ್ ಅಂಧ ಅಂತ ಗೊತ್ತಿದ್ದರೂ ಆತನ ಜತೆಗೆ ಮದುವೆಗೆ ಒಪ್ಪಿಕೊಂಡಿರುವುದು ನಿಜವಾದ ಪ್ರೀತಿಗೆ ತಾಜಾ ಉದಾಹರಣೆಯಾಗಿದೆ.
ಚಾಂದಿನಿ ಮತ್ತು ದಿಲೀಪ್ ಅವರ ಪ್ರೀತಿಯನ್ನು ಕಂಡು ಮೂಕವಿಸ್ಮಿತರಾಗಿರುವ ಎರಡು ಕುಟುಂಬದವರು ಇಬ್ಬರ ಮದುವೆಗೆ ಹಸಿರು ನಿಶಾನೆ ಸಹ ತೋರಿದ್ದಾರೆ. ಇದೀಗ ಮದುವೆ ಮೂಲಕ ಇಬ್ಬರ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಇಬ್ಬರು ನಿರ್ಧರಿಸಿದ್ದು, ಅಂಧ ಅಂತ ಗೊತ್ತಿದ್ದರೂ ಆತನನ್ನು ಒಪ್ಪಿಕೊಂಡಿರುವ ಚಾಂದಿನಿ ನಿರ್ಧಾರಕ್ಕೆ ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
PublicNext
27/01/2022 01:34 pm