ಬೆಳಗಾವಿ: ಪೊಲೀಸರನ್ನು ಕಂಡರೆ ಸಾಕು ಭಯ ಎಂದು ಹೇಳುವ ಕಾಲದಲ್ಲಿ ಪಿಎಸ್ಐ ಒಬ್ಬರು ಹಾಡುತ್ತಾ ಮಕ್ಕಳಿಗೆ ಪಾಠ ಮಾಡಿ ಅವರನ್ನು ರಂಜಿಸಿದ್ದಾರೆ.
ಹೌದು. ಸವದತ್ತಿ ಪಿಎಸ್‌ಐ ಶಿವಾನಂದ ಗುಡಗನಟ್ಟಿ ಅವರು ತಾಲ್ಲೂಕಿನ ಕುರುವಿನಕೊಪ್ಪ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿ, ಹಾಡು ಕಲಿಸಿ ಗಮನಸೆಳೆದಿದ್ದಾರೆ. ಪಿಎಸ್‌ಐ ಶಿವಾನಂದ ಅವರು ಜನವರಿ 24ರಂದು 'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ'ವನ್ನು ಮಕ್ಕಳ ಜೊತೆ ಮಕ್ಕಳಾಗಿ ಕಳೆದಿದ್ದಾರೆ.
ಮಕ್ಕಳಿಗೆ ಜಾನಪದ ಹಾಡಿನೊಂದಿಗೆ ಪಾಠ ಹೇಳಿ, ಅವರೊಂದಿಗೆ ಹೆಜ್ಜೆ ಹಾಕಿ ರಂಜಿಸಿದ್ದಾರೆ. ಅವರು ಮಕ್ಕಳೊಂದಿಗೆ ಬೆರೆತು ಕಲಿಸುತ್ತಿರುವ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪೋಷಕರಿಂದ ಅಭಿನಂದನೆಯ ಮಹಾಪೂರ ಹರಿದುಬಂದಿದೆ. ಅಷ್ಟೇ ಅಲ್ಲದೆ ಪಿಎಸ್ಐ ಶಿವಾನಂದ ಗುಡಗನಟ್ಟಿ ಅವರ ಈ ಕೆಲಸಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.
PublicNext
26/01/2022 11:41 am