ಬೆಂಗಳೂರು: 2022ನೇ ಸಾಲಿನ ಪದ್ಮ ಪ್ರಶಸ್ತಿಗೆ ರಾಜ್ಯದ ಐವರು ಆಯ್ಕೆಯಾಗಿದ್ದಾರೆ . ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಮಂಗಳವಾರ ರಾತ್ರಿ ಘೋಷಿಸಿದೆ.
ಒಟ್ಟು 107 ಪದ್ಮಶ್ರೀ, 17 ಪದ್ಮ ಭೂಷಣ ಹಾಗೂ 4 ಪದ್ಮ ವಿಭೂಷಣ ಘೋಷಿಸಲಾಗಿದೆ. ಕರ್ನಾಟಕದ ಐವರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕವಿ ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ, ಸುಬ್ಬಣ್ಣ ಅಯ್ಯಪ್ಪನ್ (ವಿಜ್ಞಾನ ಮತ್ತು ಎಂಜಿನಿಯರಿಂಗ್),
ಎಚ್.ಆರ್.ಕೇಶವಮೂರ್ತಿ (ಕಲೆ), ಅಬ್ದುಲ್ ಖಾದರ್ ನಡಕಟ್ಟಿನ (ಇತರೆ), ಹಾಗೂ ಅಮೈ ಮಹಾಲಿಂಗ್ ನಾಯ್ಕ (ಇತರೆ – ಕೃಷಿ) ಅವರಿಗೆ ಪದ್ಮಶ್ರೀ ಘೋಷಿಸಲಾಗಿದೆ.
ಈ ಮಹನೀಯ ಸಾಧನೆ ನಿಜಕ್ಕೂ ಇತರರಿಗೆ ಸ್ಫೂರ್ತಿ
PublicNext
25/01/2022 10:17 pm