ಚೆನ್ನೈ: ಪುದುಚೇರಿಯ ಲೆ.ಗವರ್ನರ್ ಡಾ.ತಮಿಳಿಸೈ ಸೌಂದರರಾಜನ್ ಅವರು ಸಕಾಲದಲ್ಲಿ ಚಿಕಿತ್ಸೆ ನೀಡಿ ವೃದ್ಧೆಯೋರ್ವರ ಪ್ರಾಣ ಕಾಪಾಡಿದ್ದಾರೆ.
ತಮಿಳಿಸೈ ಅವರು ಪೊಂಗಲ್ ಹಬ್ಬ ಆಚರಿಸಲು ಇಂದು ಚೆನ್ನೈಗೆ ತೆರಳಿದ್ದರು. ಸಾಲಿಗ್ರಾಮದ ನಿವಾಸದಲ್ಲಿ ಹಬ್ಬದ ಸಿದ್ಧತೆಯಲ್ಲಿದ್ದಾಗ ವೃದ್ಧೆಯೊಬ್ಬರು ಪ್ರಜ್ಞೆತಪ್ಪಿ ಬಿದ್ದರು. ಇದನ್ನು ನೋಡಿರುವ ತಮಿಳಿಸೈ ಅವರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದ್ದಾರೆ.
ತಮಿಳಿಸೈ ವೃತ್ತಿಪರ ವೈದ್ಯೆಯಾಗಿದ್ದು, ವೃದ್ಧೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇದರ ಬೆನ್ನಲ್ಲೇ 108 ಆ್ಯಂಬುಲೆನ್ಸ್ಗೆ ಕರೆ ಮಾಡಿ, ಖಾಸಗಿ ಆಸ್ಪತ್ರೆಗೆ ರವಾನಿಸಿದರು. ತಮಿಳಿಸೈ ಅವರ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
PublicNext
14/01/2022 06:58 pm