ಅಲಾಸ್ಕಾ: ಒಂದು ಪುಟ್ಟ ರಟ್ಟಿನ ಪೆಟ್ಟಿಗೆಯಲ್ಲಿ ನವಜಾತ ಶಿಶು. ಅದರ ಪಕ್ಕದಲ್ಲಿಯೇ ಚಿಕ್ಕದಾಗಿ ಬರೆದ ಒಂದು ಚೀಟಿ. ಅದನ್ನ ತೆಗೆದು ಓದಿದ ಆ ಮಹಿಳೆಗೆ ಕಣ್ಣಂಚಿನಲ್ಲಿ ಕಂಬನಿಯ ಹನಿ. ಯಾಕೆ ಗೊತ್ತೇ ? ಹೇಳ್ತೀವಿ ನೋಡಿ.
ಅಲಾಸ್ಕಾದ ಚಳಿಗಾಲದ ಆ ಒಂದು ದಿನ, ರಸ್ತೆ ಪಕ್ಕದಲ್ಲಿ ಒಂದು ರಟ್ಟಿನ ಪೆಟ್ಟಿಗೆ ಇತ್ತು. ಆ ಪೆಟ್ಟಿಗೆಯಲ್ಲಿ ನವಜಾತ ಶಿಶು ಇತ್ತು. ಅದರ ಪಕ್ಕದಲ್ಲಿಯೇ ಇದ್ದ ಪುಟ್ಟ ಹಾಳೆಯಲ್ಲಿ ಹೀಗೆ ಬರೆಯಲಾಗಿತ್ತು.
ನಾನು ಡಿಸೆಂಬರ್-31 ರಂದು ಜನಿಸಿದ್ದೇನೆ.ನನ್ನ ಅಮ್ಮ ನನ್ನ ಇಲ್ಲಿ ಬಿಟ್ಟು ಹೋಗಿದ್ದಾಳೆ.ಆಕೆಗೆ ಮತ್ತು ಅಜ್ಜಿಗೆ ನನ್ನ ಸಾಕಲು ಆಗುತ್ತಿಲ್ಲ. ನನಗೆ ಟೆಶಾನ್ ಅಂತ ಹೆಸರಿಟ್ಟಿದ್ದಾರೆ. ಒಂದು ಒಳ್ಳೆ ಕುಟುಂಬದವರು ನನ್ನ ಸಾಕಬೇಕು ಅಂತಲೇ ಕೇಳಿಕೊಂಡಿದ್ದಾರೆ.
ಮಗು ಮತ್ತು ಪುಟ್ಟ ಲೆಟರ್ ಎರಡನ್ನೂ ಓದಿದ ರಾಕ್ಸಿ ಲೇನ್ ಎಂಬ ಮಹಿಳೆ ಅದರ ಬಗ್ಗೆ ಟ್ವಿಟರ್ ನಲ್ಲೂ ಬರೆದುಕೊಂಡಿದ್ದಾರೆ. ಅದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದ್ಹಾಗೆ ಮಗು ಪೊಲೀಸರ ಬಳಿಯೇ ಇದೆ.ತಾಯಿ ಹುಡುಕಾಟವನ್ನ ಪೊಲೀಸರು ಈಗಾಗಲೇ ಆರಂಭಿಸಿದ್ದಾರೆ.
PublicNext
04/01/2022 05:24 pm