ಮದುವೆಯ ಬಳಿಕ ಎಲ್ಲರ ಡ್ರಿಮ್ ಹನಿಮೂನ್ ಇದು ತುಂಬಾ ಸ್ಪೆಷಲ್ ಆಗಿರಲು ಮುಂಚಿತವಾಗಿ ಮಾಡುವ ಪ್ಲಾನ್ ಬಹುಮುಖ್ಯ. ಡ್ರಿಮ್ ಹನಿಮೂನ್ ಪ್ಲಾನ್ ಹೀಗಿರಲಿ
ಹನಿಮೂನ್ ದಂಪತಿ ಮಧ್ಯೆ ಅನ್ಯೂನ್ಯತೆ ಹೆಚ್ಚಿಸುತ್ತದೆ. ಆ ಕ್ಷಣಗಳು ಸದಾ ನೆನಪಿನಲ್ಲಿರಬೇಕು. ಹನಿಮೂನ್ ನವ ಜೋಡಿಯನ್ನು ಹತ್ತಿರಕ್ಕೆ ತರಲು ನೆರವಾಗುತ್ತದೆ. ದೈಹಿಕ ಹಾಗೂ ಭಾವನಾತ್ಮಕವಾಗಿ ಇಬ್ಬರನ್ನು ಒಂದುಗೂಡಿಸುವ ಕೆಲಸವನ್ನು ಹನಿಮೂನ್ ಮಾಡುತ್ತದೆ.
ಸ್ಥಳದ ಆಯ್ಕೆ : ಪರಸ್ಪರ ಮಾತನಾಡಿಕೊಂಡು ಹನಿಮೂನ್ ಗೆ ಸರಿಯಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಒಬ್ಬರಿಗೆ ಪರ್ವತ ಪ್ರದೇಶ ಇಷ್ಟವಾದ್ರೆ ಮತ್ತೆ ಕೆಲವರಿಗೆ ಬೀಚ್ ಇಷ್ಟವಾಗಬಹುದು.
ಮಧುಚಂದ್ರಕ್ಕೆ ಮುಹೂರ್ತ : ದಿನಾಂಕ ನಿಗದಿಮಾಡಿ ಮದುವೆಯಾದ ಮರುದಿನವೇ ಹನಿಮೂನ್ ಗೆ ಪ್ಲಾನ್ ಮಾಡಬೇಡಿ. ಹಾಗೆ ಮದುವೆಯಾದ ತುಂಬಾ ದಿನಗಳ ನಂತ್ರವೂ ಪ್ಲಾನ್ ಮಾಡಬೇಡಿ. ಸರಿಯಾದ ನಿರ್ಧಾರ ತೆಗೆದುಕೊಳ್ಳಿ.
ಮಧುಚಂದ್ರಕ್ಕೆ ಟಿಕೆಟ್ : ಮಧುಚಂದ್ರದ ಸ್ಥಳಕ್ಕೆ ಹೋಗಲು ರೈಲು, ಬಸ್, ಹಡಗು ಅಥವಾ ವಿಮಾನದ ಟಿಕೆಟ್ ಬುಕ್ ಮಾಡಿ. ಉಳಿದುಕೊಳ್ಳುವ ಹೋಟೆಲ್ ನಲ್ಲಿ ಕೊಠಡಿಯನ್ನು ಕಾಯ್ದಿರಿಸಿ.
ಸ್ಥಳದ ಬಗ್ಗೆ ಒಂದಿಷ್ಟು ತಿಳಿದಿರಿ : ಹನಿಮೂನ್ ಗೆ ಹೋಗಲು ಪ್ಲಾನ್ ಮಾಡಿರುವ ಸ್ಥಳದ ಬಗ್ಗೆ ಸ್ವಲ್ಪ ತಿಳಿದಿರಬೇಕು. ಗೂಗಲ್ ಮಾಡಿ ಇಲ್ಲವೆ ಅಲ್ಲಿಗೆ ಹೋಗಿಬಂದವರಿಂದ ತಿಳಿದುಕೊಳ್ಳಿ. ಸ್ಪೇಷಲ್ ತಿಂಡಿ ಏನು? ಅಲ್ಲಿನ ಹವಾಮಾನ ಹೇಗಿದೆ ಎಂಬುದನ್ನು ತಿಳಿದು ಅದಕ್ಕೆ ತಕ್ಕಂತೆ ಡ್ರೆಸ್ ಪ್ಯಾಕ್ ಮಾಡಿಕೊಳ್ಳಿ.
ಮಧುಚಂದ್ರಕ್ಕಾಗಿ ಶಾಪಿಂಗ್ : ಮದುವೆಯ ಜೊತೆಗೆ ನಿಮ್ಮ ಹನಿಮೂನ್ ಗಾಗಿ ನೀವು ಶಾಪಿಂಗ್ ಮಾಡಬೇಕು. ಆಗ ಸಮಯ ಉಳಿಯುತ್ತದೆ. ಹನಿಮೂನ್ ಗೆ ಹೋಗುವ ಸ್ಥಳದ ಸೀಸನ್ ಗೆ ಅನುಗುಣವಾಗಿ ಬಟ್ಟೆಗಳನ್ನು ಖರೀದಿಸಿ.
ಹನಿಮೂನ್ ಅಂದ್ರೆ ಕೇವಲ ಶಾರೀರಿಕ ಸಂಬಂಧ ಬೆಳೆಸುವುದಲ್ಲ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇರುವ ಸಮಯ. ಕೆಲಸಕ್ಕೆ ರಜೆ ಪಡೆದೇ ಹನಿಮೂನ್ ಗೆ ಹೋಗಿ. ಅಲ್ಲಿ ಹೋದ್ಮೇಲೆ ಕೆಲಸ ಮಾಡಬೇಡಿ.
PublicNext
04/01/2022 02:26 pm