ಅಮೃತಸರ: ಹುಟ್ಟುವಾಗಲೇ ಅಂಗವೈಕಲ್ಯದಿಂದ ಹುಟ್ಟುವುದು ಅವರ ತಪ್ಪಲ್ಲ ಆದರೆ ಅದೇ ಅಂಗವಕಲ್ಯವನ್ನು ಶಾಪವೆಂದು ಭಾವಿಸದೇ ಅದನ್ನು ಸವಾಲಾಗಿ ತೆದೆಗುಕೊಳ್ಳುವುದೇ ಜೀವನ.
ಹುಟ್ಟುವಾಗ ಸಹೋದರರು ಬೆಳೆಯುವಾಗ ದಾಯಾದಿಗಳು ಎಂಬ ಮಾತಿದೆ. ಆದರೆ ಈ ಇಬ್ಬರ ವಿಷಯದಲ್ಲಿ ಆ ಮಾತು ಹುಸಿಯಾಗಿದೆ.
ಹೌದು, ಪಂಜಾಬ್ ನಲ್ಲಿ ಸಯಾಮಿ ಅವಳಿಗಳು ಈಗ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಒಂದು ಇವರ ಈ ವಿಶೇಷತೆಯಿಂದ ಹೆಸರಾದರೆ ಮತ್ತೊಂದು ಇವರಲ್ಲಿ ಓರ್ವರು ಸರ್ಕಾರಿ ಹುದ್ದೆ ಪಡೆದುಕೊಂಡಿರುವುದು.
ಅಮೃತಸರದ ಪಿಂಗಲ್ವಾಡದ ನಿವಾಸಿಗಳಾದ ಸಯಾಮಿ ಅವಳಿಗಳಾದ ಸೋಹ್ನಾ ಮತ್ತು ಮೋಹ್ನಾ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ.
ವಿಪರ್ಯಾಸ ನೋಡಿ ಒಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕರೇ ಇನ್ನೊಬ್ಬರು ಅವರ ಜೊತೆಗೆ ಹೋಗಲೇಬೇಕು ಅಂತಹ ನಂಟು ಈ ಸಹೋದರರದ್ದು.
ಸೋಹ್ನಾ ಮತ್ತು ಮೊಹ್ನಾ ಈ ಬಗ್ಗೆ ಮಾತನಾಡಿ, ಈ ಅವಕಾಶ ಮಾಡಿಕೊಟ್ಟ ಪಂಜಾಬ್ ಸರ್ಕಾರ ಮತ್ತು ತಮಗೆ ಶಿಕ್ಷಣ ನೀಡಿ ಈ ಮಟ್ಟಕ್ಕೆ ಬೆಳೆಸಿದ ಪಿಂಗಲ್ವಾಡ ಸಂಸ್ಥೆಗೆ ಧನ್ಯವಾದ ಎಂದಿದ್ದಾರೆ.
ಸಹೋದರರ ಬಗ್ಗೆ ತಿಳಿಯುವುದಾದರೆ..
ಎರಡು ಕಾಲುಗಳನ್ನು ಹೊಂದಿರುವ ಈ ಸಹೋದರರಿಗೆ ನಾಲ್ಕು ಕೈಗಳು ಎರಡು ತಲೆ ಇವೆ. ಸಯಾಮಿ ಅವಳಿಗಳಾದ ಸೋಹ್ನಾ ಮತ್ತು ಮೋಹ್ನಾ ಜುಲೈ 14, 2003ರಲ್ಲಿ ಅಮೃತಸರದಲ್ಲಿ ಜನಿಸಿದ್ದಾರೆ. 2 ಹೃದಯ, ಕಿಡ್ನಿ ಮತ್ತು ಸ್ಪೈನಲ್ ಕಾರ್ಡ್ಗಳನ್ನು ಹೊಂದಿರುವ ಇವರು, ಕರುಳು, ಮೂತ್ರಕೋಶ ಮತ್ತು ಕಾಲುಗಳನ್ನು ಹಂಚಿಕೊಂಡಿದ್ದಾರೆ.
ಬಾಲ್ಯದಲ್ಲಿಯೇ ತಮ್ಮ ಪಾಲಕರಿಂದ ತಿರಸ್ಕರಿಸಲ್ಪಪಟ್ಟ ಈ ಸಹೋದರರು ದೆಹಲಿಯ ಅಖಿಲ ಭಾರತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಶ್ರಯದಲ್ಲಿ ಬೆಳೆದಿದ್ದಾರೆ.
PublicNext
24/12/2021 05:37 pm