ಸೌಂದರ್ಯದ ಕಾಳಜಿ ಮಹಿಳೆಯರಿಗಷ್ಟೇ ಅಲ್ಲದೆ ಪುರುಷರಿಗೂ ಇರುತ್ತದೆ. ಅವರಿಗಾಗಿ ಕೆಲವು ಟಿಪ್ಸ್ ಇಲ್ಲಿವೆ ನೋಡಿ..
ಪುರುಷರ ಮುಖದ ಮೇಲೆ ಮೊಡವೆಗಳ ನಿವಾರಣೆ ಹೀಗೆ ಮಾಡಿ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಗುಳ್ಳೆಗಳನ್ನು ನಿವಾರಿಸಲು ನೆರವಾಗುತ್ತದೆ. ಇದರ ಪ್ಯಾಕ್ ಮಾಡಿಕೊಳ್ಳಿ.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಈ ಮಿಶ್ರಣಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಳಿಕ ತೊಳೆಯಿರಿ. ಇದರಿಂದ ಮುಖದ ಮೊಡವೆ ಕಡಿಮೆಯಾಗುತ್ತದೆ.
ಪುದೀನಾ ಚರ್ಮದ ರಂಧ್ರಗಳನ್ನು ತೊಡೆದು ಹಾಕಿ ಮೊಡವೆಗಳಿಗೆ ಚಿಕಿತ್ಸೆ ನೀಡುತ್ತದೆ. ಪುದೀನಾ ಎಲೆಯನ್ನು ಜಜ್ಜಿ ಅದಕ್ಕೆ ಓಟ್ ಮೀಲ್ ಸೇರಿಸಿ ಮಿಶ್ರಣ ಮಾಡಿ ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದು ನಿಮ್ಮ ತ್ವಚೆಯನ್ನು ತಾಜಾವಾಗಿಸುತ್ತದೆ.
ಮಂಜುಗಡ್ಡೆ ಕ್ಯೂಬ್ ಗಳನ್ನು ಕರವಸ್ತ್ರದಲ್ಲಿ ಕಟ್ಟಿ ಮೊಡವೆ ಇರುವ ಜಾಗಕ್ಕೆ ಇಡಿ. ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಚರ್ಮದ ರಂಧ್ರಗಳು ಮುಚ್ಚುತ್ತವೆ.
ಆಪಲ್ ಸೈಡರ್ ವಿನೆಗರ್ ಚರ್ಮಕ್ಕೆ ಅತ್ಯುತ್ತಮ ಆಯ್ಕೆ. ಇದು ಮೊಡವೆಯಿಂದಾದ ನೋವನ್ನು ಕಡಿಮೆ ಮಾಡುತ್ತದೆ. ನೀರಿಗೆ ಇದನ್ನು ಬೆರೆಸಿ ಹತ್ತಿಯನ್ನು ದ್ರಾವಣದಲ್ಲಿ ಅದ್ದಿ ಮೊಡವೆಯ ಮೇಲೆ ಹಚ್ಚಿ.
PublicNext
21/12/2021 03:05 pm