ನವದೆಹಲಿ: ದೊಡ್ಡವರು ಒಂದು ಮಾತು ಹೇಳಿದ್ದಾರೆ ಬದುಕಿನಲ್ಲಿ ಎಲ್ಲವೂ ಇದ್ರೆ ಚನ್ನ ಎಂದು. ಅದು ಬಂಗಾರ, ಆಸ್ತಿ, ಐಶ್ವರ್ಯವಲ್ಲ ಬದಲಾಗಿ ಅಪ್ಪ,ಅಮ್ಮ ಒಡಹುಟ್ಟಿದವರು.
ಸದ್ಯ ಇಲ್ಲೊಂದು ವಿಡಿಯೋದಲ್ಲಿ ವಧು ಅಮ್ಮನ ಫೋಟೋ ಹಿಡಿದುಕೊಂಡು ಅಪ್ಪನ ಕೈ ಹಿಡಿದು ಭಾರದ ಹೆಜ್ಜೆ ಹಾಕುತ್ತಾ ಮದುವೆ ಮಂಟಪಕ್ಕೆ ಎಂಟ್ರಿ ಕೊಡುತ್ತಿರುವ ದೃಶ್ಯ ಕಣ್ಣಾಲೆಯನ್ನು ಒದ್ದೆ ಮಾಡುತ್ತದೆ.
ಮನುಷ್ಯ ಜೀವನದಲ್ಲಿ ಅರ್ಥಪೂರ್ಣವಾದ ಹಂತವೇ ಮದುವೆ. ಈ ವಿಶೇಷ ಕ್ಷಣದಲ್ಲಿ ಹೆತ್ತವರು ಜೊತೆಯಲ್ಲಿರಬೇಕು ಎಂಬ ಆಸೆ ಎಲ್ಲರಿಗೂ ಇರುವುದು ಸಾಮಾನ್ಯ.
ಹಾಗೆಯೇ ಹೆತ್ತವರಿಗೂ ತಮ್ಮ ಮಕ್ಕಳ ಮದುವೆಯನ್ನು ಕಣ್ಣು ತುಂಬಿಸಿಕೊಳ್ಳುವ ಆಸೆ ಇರುತ್ತದೆ. ಆದರೆ ಮಕ್ಕಳ ವಿವಾಹದ ಮುಂಚೆಯೇ ತಂದೆ-ತಾಯಿ ಅಗಲಿದಾಗ ಆಗುವ ಆ ನೋವು ಯಾರಿಗೂ ಬಾರದಿರಲಿ.
ವಿಡಿಯೋದಲ್ಲಿ ಅಮ್ಮನಿಲ್ಲದ ಆಕೆ ಅಪ್ಪನೊಂದಿಗೆ ಭಾವುಕಳಾಗಿರುವ ದೃಶ್ಯ ಕಾಣಬಹುದು.
ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಿಗುವ ದೃಶ್ಯಗಳು ನಮ್ಮನ್ನು ನಿಜಕ್ಕೂ ಭಾವುಕರನ್ನಾಗಿಸುತ್ತದೆ. ‘ಮಹಾಸ್ ಫೋಟೋಗ್ರಾಫಿಆಫಿಶಿಯಲ್’ ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
PublicNext
16/12/2021 10:52 pm