ಬಾಗಲಕೋಟೆ: ಹೆತ್ತಬ್ಬೆಯನ್ನು, ಮನೆತನದ ಹಿರಿಮೆಯನ್ನು ಹೇಳಿ ಕೊಟ್ಟು ಸಂಸ್ಕಾರ ಕಲಿಸಿದ ಅಜ್ಜಿಯನ್ನು ಕಡೆಗಣಿಸಿ ವೃದ್ಧಾಶ್ರಮ ಸೇರಿಸುವ ಮಕ್ಕಳ ನಡುವೆ ಇಲ್ಲೊಂದು ಕುಟುಂಬ ಶತಾಯುಷಿ ಅಜ್ಜಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದರ ಮೂಲಕ ಎಲ್ಲರಿಗೂ ಮಾದರಿ ಕುಟುಂಬವೆಂದೆನಿಸಿಕೊಂಡಿದ್ದಾರೆ.
ಹೌದು ಮಕ್ಕಳು, ಮೊಮ್ಮಕ್ಕಳೆಲ್ಲಾ ಸೇರಿಕೊಂಡು ಸಂಭ್ರಮದಿಂದ ಅಜ್ಜಿಯ ಜನ್ಮ ದಿನಾಚರಣೆ ಆಚರಿಸಿದ್ದಾರೆ. ಶತಾಯುಷಿ ಗೌರಮ್ಮ ನಿಂಗಪ್ಪ ತೋಟಗಿ ಎಂಬುವವರಿಗೆ ನಡೆದ 102ನೇ ವಷ೯ದ ಹುಟ್ಟು ಹಬ್ಬದ ಸಮಾರಂಭದ ಝಲಕ್ ಇದು.
ಇಲ್ಲಿನ ಮಳಲಿ ಗ್ರಾಮದ ತೋಟಗಿ ಕುಟುಂಬದಲ್ಲಿ ಶತಾಯುಷಿ ಮಹಾತಾಯಿಯ ಜನುಮದಿನವನ್ನು ಬಹಳ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು. ತಾಯಿಗೆ ಪಾದಪೂಜೆ ಮಾಡಿ ಮಕ್ಕಳು, ಮೊಮ್ಮಕ್ಕಳು ಆಶೀರ್ವಾದ ಪಡೆದು ಹೂವಿನ ಹಾರ ಹಾಕಿ
ಮನೆ ಮಂದಿಯ ಸಮ್ಮುಖದಲ್ಲಿ ಹುಟ್ಟು ಹಬ್ಬ ಬಹಳ ಸಂಭ್ರಮದಿಂದ ನಡೆಯಿತು.
PublicNext
15/12/2021 11:47 am