ಕೊಪ್ಪಳ:ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಹೊಲವೊಂದರಲ್ಲಿರೋ ಬೇವಿನ ಮರದಿಂದ ಕ್ಷೀರಧಾರೆ ಆಗುತ್ತಿದೆ. ಜನ ಮರುಳೋ ಜಾತ್ರೆ ಮರುಳು ಅನ್ನೋ ಹಾಗೇ ಜನ ಇಲ್ಲಿ ಬಂದು ಪೂಜೆ-ಪುನಷ್ಕಾರ ಮಾಡುತ್ತಿದ್ದಾರೆ.
ಗ್ರಾಮದ ಗೋಪಾಲ್ ದೇಸಾಯಿ ಅವರ ಹೊಲದಲ್ಲಿರೋ ಹಳೆ ಬೇವಿನ ಮರದಲ್ಲಿಯೇ ಈಗ ಹಾಲು ಸುರಿಯುತ್ತಿದೆ.ಇದನ್ನ ತಿಳಿದ ಗ್ರಾಮದ ಜನ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಮರದಡಿಯಲ್ಲಿ ಕಲ್ಲುಗಳನ್ನ ಇಟ್ಟು ಗದ್ದಿ ದ್ಯಾಮಮ್ಮನನ್ನೂ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಮರೆದಲ್ಲಿ ಹಾಲುವು ಸುರಿಯುವುದನ್ನ ತಿಳಿದ ಕೆಲ ಗ್ರಾಮಸ್ಥರು ಏನೋ ಕೇಡುಗಾಲ ಬಂದಿದೆ ಅಂತ ಜ್ಯೋತಿಷಿಗಳ ಮನೆಗೂ ಹೋಗುತ್ತಿದ್ದಾರೆ. ಅವರು ಹೇಳಿದಂತೆ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಅದಕ್ಕೇನೆ ಈಗ ಬೇವಿನ ಮರ ಪೂಜೆಗಾಗಿಯೇ ಇಲ್ಲಿ ಜನ ಜಾತ್ರೆನೆ ಸೇರುತ್ತಿದೆ.
ಆದರೆ ವೈಜ್ಞಾನಿಕ ಕಾರಣ ಬೇರೆನೆ ಇದೆ.ಮರಕ್ಕೆ ಅದರದ್ದೆ ಆದ ಶಕ್ತಿ ಇರುತ್ತದೆ. ಕೀಟಗಳ ದಾಳಿಯನ್ನ ತಿಪ್ಪಿಸಲು ಫ್ಲ್ಯುಯಿಡ್ ಅಂಶವನ್ನ ಮರ ಕ್ಷೀರದ ರೂಪದಲ್ಲಿ ಸೂಸುತ್ತದೆ. ಅದನ್ನೇ ಜನ ಕ್ಷೀರ ಅಂತ ತಿಳಿದು ಪೂಜೆ ಸಲ್ಲಿಸುತ್ತಿದ್ದಾರೆ.
PublicNext
12/12/2021 12:44 pm