ಸುಳ್ಯದ ಕಲಾವಿದ ಶಶಿ ಅಡ್ಕಾರ್ ರಿಂದ ಬಿಪಿನ್ ರಾವತ್ ಗೆ ಕಲಾನಮನ..
ಇಂಗು ಎಲೆಯನ್ನ ಬಳಸಿ ಬಿಪಿನ್ ರಾವತ್ರ ಅದ್ಭುತ ಕಲಾಕೃತಿ ರಚಿಸುವ ಮೂಲಕ ಸುಳ್ಯದ ಕಲಾವಿದ ಶಶಿ ಅಡ್ಕಾರ್ ಕಲಾ ನಮನ ಸಲ್ಲಿಸಿದ್ದಾರೆ. ತಕ್ಷಣಕ್ಕೆ ಇದು ಏನೆಂಬುದೆ ತಿಳಿಯೋದಿಲ್ಲ. ನಂತರ ನೋಡಿದಾಗ ಬಿಪಿನ್ ರಾವತ್‌ರ ಬಿಂಬ ಸ್ಪಷ್ಟವಾಗಿ ಕಾಣುತ್ತದೆ. ಕೇವಲ ಎಲೆಯಿಂದ ಈ ಅದ್ಭುತ ಕಲಾಕೃತಿ ರಚಿಸುವ ಮೂಲಕ ಶಶಿ ಅಡ್ಕರ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಹಿಂದೆಯೂ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
PublicNext
10/12/2021 02:35 pm