ಸೂರತ್:ವ್ಯಾಪಾರಿಗಳು ಅಳೆದು-ತೂಗಿ ಹಣ ಖರ್ಚು ಮಾಡುತ್ತಾರೆ. ಅದರಲ್ಲೂ ಚಿನ್ನಾಭರಣ ಮತ್ತು ವಜ್ರದ ವ್ಯಾಪಾರಿಗಳ ಲೆಕ್ಕವೇ ಬೇರೆ. ಆದರೆ ಸೂರತ್ ನ ವಜ್ರದ ವ್ಯಾಪಾರಿ ಮಹೇಶ್ ಸವಾನಿ ನಿಜಕ್ಕೂ ವಿಭಿನ್ನವಾಗಿಯೇ ಇದ್ದಾರೆ. ಅನಾಥ ಹೆಣ್ಣುಮಕಳ್ಳಿಗೆ ಇವರೇ ಅಪ್ಪ. ಹೇಗೆ ಮತ್ತು ಯಾಕೆ ಅಂತಿರೋ. ಹಾಗಾದ್ರೆ ಈ ಸ್ಟೋರಿ ಓದಿ.
ಮಹೇಶ್ ಸವಾನಿ ಕಳೆದ 2008 ರಿಂದಲೇ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಅದರಲ್ಲೂ ಅನಾಥ ಹೆಣ್ಣು ಮಕ್ಕಳ ಜೀವನಕ್ಕೆ ಇವರೇ ಆಧಾರ. ನಿಜ, ಮಹೇಶ್ ಸವಾನಿ ಪ್ರತಿ ವರ್ಷ ಅನಾಥ ಹೆಣ್ಣುಮಕ್ಕಳ ಮದುವೆ ಮಾಡಿಸುತ್ತಾರೆ. ಸಾಮೂಹಿಕ ಮದುವೆ ಮೂಲಕ ಅನಾಥ ಮಕ್ಕಳಿಗೆ ತಂದೆಯಾಗಿ ಕನ್ಯಾದಾನ ಮಾಡುತ್ತಾರೆ.
ಈ ವರ್ಷ 300 ಅನಾಥ ಹೆಣ್ಣುಮಕ್ಕಳ ಮದುವೆ ಮಾಡಿಸಿದ್ದಾರೆ. ಜಾತಿ-ಧರ್ಮ ಹೀಗೆ ಯಾವುದನ್ನೂ ಲೆಕ್ಕಿಸದೇ ಮಹೇಶ್ ಸವಾನಿ ಮದುವೆ ಮಾಡಿಸುತ್ತಲೇ ಬಂದಿದ್ದಾರೆ.ಈ ಮೂಲಕ ಅನಾಥ ಮಕ್ಕಳ ಅಪ್ಪನಾಗಿ ಸಮಾಜದಲ್ಲಿ ಎಲ್ಲರಿಗೂ ಸ್ಪೂರ್ತಿ ಆಗಿದ್ದಾರೆ.
PublicNext
06/12/2021 04:57 pm