ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫ್ಲಾಗ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡ ಹಂಪಿಹೊಳಿ: ಇವರು ಧಾರವಾಡದವರು

ಧಾರವಾಡ: ಧಾರವಾಡದವರೇ ಆದ ವೈಸ್ ಅಡ್ಮಿರಲ್ ಮಕರಂದ್ ಅರವಿಂದ ಹಂಪಿಹೊಳಿ ಅವರು ಕೇರಳದ ಕೊಚ್ಚಿಯಲ್ಲಿ ದಕ್ಷಿಣ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಅವರು ದಕ್ಷಿಣ ನೌಕಾ ಕಮಾಂಡ್‌ನ ಕಮಾಂಡ್ ಫ್ಲಾಗ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಎಜಿಮಿರಲ್‌ದಲ್ಲಿರುವ ಪ್ರತಿಷ್ಠಿತ ಭಾರತೀಯ ನೌಕಾ ಅಕಾಡೆಮಿಯ ಕಮಾಂಡೆಂಟ್ ಆಗಿದ್ದರು.

ಮಕರಂದ್ ಅವರು ಧಾರವಾಡದಲ್ಲಿ ಜನಿಸಿದ್ದಾರೆ ಎಂಬುದು ಹೆಮ್ಮೆ. ಅಲ್ಲದೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದ ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಮುಗಿಸಿದ್ದಾರೆ. ನಂತರ ವಿಜಯಪುರದ ಸೈನಿಕ ಶಾಲೆಗೆ ಸೇರಿದ ಅವರು, ಸೈನಿಕ ಶಾಲೆಯಿಂದ ಉತ್ತೀರ್ಣರಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿದ್ದರು.

Edited By : Nirmala Aralikatti
PublicNext

PublicNext

04/12/2021 10:37 am

Cinque Terre

48.1 K

Cinque Terre

13

ಸಂಬಂಧಿತ ಸುದ್ದಿ