ಗುಜರಾತ್: ಪೊಲೀಸರು ಅಂದ್ರೆ ಭಯ.ಪೊಲೀಸರು ಅಂದ್ರೆ ಭ್ರಷ್ಟರು. ಪೊಲೀಸ್ ಅಂದ್ರೆ ಇನ್ನು ಏನೇನೋ. ಹೌದು ಪೊಲೀಸರ ಬಗ್ಗೆ ಜನರಲ್ಲಿ ಒಳ್ಳೆ ಅಭಿಪ್ರಾಯ ಬರೋದು ತೀರ ಕಡಿಮೆ.ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಟ್ರಾನ್ಸ್‌ಫರ್ ಆಗಿದಕ್ಕೆ ಇಲ್ಲಿಯ ಜನರು ಭಾವುಕ ಬೀಳ್ಕೊಡುಗೆನೆ ಕೊಟ್ಟಿದ್ದಾರೆ.ಆ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಗುಜರಾತ್‌ನ ಖೇದ್‌ಬ್ರಹ್ಮ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಶಾಲಭಾಯ್ ಪಟೇಲ್ ಇಲ್ಲಿಯ ಜನರ ಹೃದಯ ಕದ್ದಿದ್ದಾರೆ. ಅದ್ಯಾವ ಕಾರಣಕ್ಕೋ ಏನೋ ವಿಶಾಲಭಾಯ್ ಇಲ್ಲಿಂದ ವರ್ಗಾವಣೆಗೊಂಡಿದ್ದಾರೆ. ಈ ವಿಷಯ ತಿಳಿದ ಊರ ಜನ ಇವರಿಗೆ ಪುಷ್ಪವೃಷ್ಟಿ ಮೂಲಕ ಬೀಳ್ಕೊಟ್ಟಿದ್ದಾರೆ. ಆ ಕ್ಷಣ ನಿಜಕ್ಕೂ ವಿಶಾಲಭಾಯ್‌ಗೆ ಕಣ್ಣುತುಂಬಿ ಬಂದಿವೆ.
ಸಬ್ ಇನ್ಸ್‌ಪೆಕ್ಟರ್ ವಿಶಾಲಭಾಯ್,ಕೊರೊನಾ ಟೈಮ್ ನಲ್ಲಿ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಆ ಕೆಲಸವೇ ಈಗ ಹೀಗೆ ಜನರಿಂದ ಗೌರವ ರೂಪದಲ್ಲಿ ದೊರೆತಿದೆ. ಅದೇ ವೀಡಿಯೋನೇ ಈಗ ಎಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿದೆ.
PublicNext
28/11/2021 07:55 pm