ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದಿ ನಾಯಿಗಳ ಪಾಲಿನ ಅನ್ನಪೂರ್ಣೇಶ್ವರಿ ಮಂಗಳೂರು ರಜನಿ ಶೆಟ್ಟಿ

ಮಂಗಳೂರು: ಬೀದಿ ನಾಯಿಗಳ ಪಾಲಿಗೆ ಯಾರೂ ಇರೋದಿಲ್ಲ. ಅದೆಲ್ಲೋ ಹುಟ್ಟುತ್ತವೆ. ಇನ್ನೆಲ್ಲೋ ಒಂದು ದಿನ ಸತ್ತು ಹೋಗುತ್ತವೆ. ಆದರೆ ಇಲ್ಲೊಬ್ಬ ಮಹಾತಾಯಿ ಇದ್ದಾರೆ. ಇವರಿಗೆ ಬೀದಿ ನಾಯಿಗಳು ಅಂದ್ರೆ ವಿಶೇಷ ಪ್ರೀತಿ ಮತ್ತು ವಿಶೇಷ ಕಾಳಜಿನೂ ಇದೆ. ಅದಕ್ಕೇನೆ ಈಗ ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾರೆ. ಬನ್ನಿ, ಹೇಳ್ತೀವಿ.

ರಜನಿ ಶೆಟ್ಟಿ ಅವರಿಗೆ ಬೀದಿ ನಾಯಿಗಳ ಮೇಲೆ ವಿಶೇಷ ಪ್ರೀತಿ ಇದೆ. ಬೀದಿ ನಾಯಿಗಳು ಕಂಡ್ರೆ ಅವುಗಳಿಗೆ ಊಟ ಹಾಕಿ ಬರ್ತಾರೆ. ನೂರಾರು ಕೆಜಿಯಷ್ಟು ಆಹಾರವನ್ನು ತಯಾರಿಸುತ್ತಾರೆ.ಅದನ್ನ ತೆಗೆದುಕೊಂಡು ಹೋಗಿ ನಾಯಿಗಳಿಗೂ ಹಾಕಿ ಬರ್ತಾರೆ.

ರಜನಿ ಶೆಟ್ಟಿ ಅವ್ರು ಕಷ್ಟದಲ್ಲಿ ಸಿಲುಕಿರುವ ನಾಯಿಗಳನ್ನೂ ರಕ್ಷಿಸಿಕೊಂಡು ಸಾಕುತ್ತಾರೆ.ಕಳೆದ 15 ವರ್ಷಗಳಿಂದ ಹೆಚ್ಚು ಕಡಿಮೆ 2000 ಕ್ಕೂ ಹೆಚ್ಚು ನಾಯಿಗಳನ್ನ ರಕ್ಷಿಸಿದ್ದಾರೆ. ಅವುಗಳಿಗೆ ಊಟ ಹಾಕಿ ಜತನದಿಂದಲೇ ನೋಡಿಕೊಂಡಿದ್ದಾರೆ.

ಮಂಗಳೂರಿನಿಂದ ಉಡುಪಿಗೆ ಹೊರಟ ವೇಳೆ ರಜನಿ ಒಂದು ಬೀದಿನಾಯಿಯನ್ನ ನೋಡಿದ್ದಾರೆ. ಅದು ಹೊಟ್ಟೆಗೆ ಊಟವಿಲ್ಲದೆ ಪರದಾಡೋದನ್ನೂ ಕಂಡಿದ್ದಾರೆ. ಅಷ್ಟೇ ನೋಡಿ. ಬೀದಿ ನಾಯಿಗಳಿಗೆ ಊಟ ಹಾಕಲೇಬೇಕು ಅಂತ ಡಿಸೈಡ್ ಮಾಡಿದ್ದಾರೆ. ಆ ದಿನದಿಂದ ಇಲ್ಲಿವರೆಗೂ ರಜನಿ ಅಂದುಕೊಂಡದನ್ನ ಮಾಡಿಕೊಂಡು ಬರ್ತಿದ್ದಾರೆ.

Edited By :
PublicNext

PublicNext

25/11/2021 05:04 pm

Cinque Terre

48.35 K

Cinque Terre

3

ಸಂಬಂಧಿತ ಸುದ್ದಿ