ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್ ಸಿಬ್ಬಂದಿಯ ಒಂದೊಳ್ಳೆ ಕೆಲಸ: ಎಲ್ಲೆಡೆ ಮೆಚ್ಚುಗೆಯ ಮಹಾಪೂರ

ದಾವಣಗೆರೆ: ನಗರದ ಗುಂಡಿಮಹಾದೇವಪ್ಪ ವೃತ್ತದಲ್ಲಿ ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ‌. ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಎಸ್. ಹೇಮಣ್ಣ ಸಾಮಾಜಿಕ ಕಳಕಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌.

ನಗರದ ಪ್ರಮುಖ ವೃತ್ತವಾದ ಗುಂಡಿ ಸರ್ಕಲ್‌ನ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದವು. ಇದು ವಾಹನ ಸವಾರರಿಗೆ ತೊಂದರೆ ಉಂಟಾಗುತಿತ್ತು.

ಇದನ್ನು ಗಮನಿಸಿದ ಹೇಮಣ್ಣ ರಸ್ತೆಯಲ್ಲಿನ ಗುಂಡಿಗಳಿಗೆ ತಾವೇ ಸ್ವತಃ ಜಲ್ಲಿ ಕಲ್ಲು ಹಾಕಿ ಮುಚ್ಚಿದ್ದಾರೆ‌. ವಾಹನಗಳ ಮೇಲೆ ನಿಗಾವಹಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ನೋಡಿಕೊಳ್ಳುವ ಮೂಲಕ ಜನರ ಜೀವ ರಕ್ಷಿಸುವ ಕರ್ತವ್ಯದ ಜೊತೆಗೆ ವಾಹನಗಳ ಸುಗಮ ಸಂಚಾರಕ್ಕೆ ಈ ರೀತಿಯ ಒಳ್ಳೆಯ ಕೆಲಸ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Edited By : Shivu K
PublicNext

PublicNext

25/11/2021 11:54 am

Cinque Terre

46.45 K

Cinque Terre

1

ಸಂಬಂಧಿತ ಸುದ್ದಿ