ಮುಂಬೈ: ಒಂದೇ ಮರದ ಕಾಂಡದಲ್ಲಿ ಮೂರು ಮೂರು ಕಿಂಗ್ ಕೋಬ್ರಾ ಹಾವುಗಳು ಕಾಣಿಸಿಕೊಂಡಿವೆ. ಹೆಡೆ ಎತ್ತಿ ನಿಂತ ಈ ಮೂರು ಹಾವುಗಳ ಆ ಒಂದು ವಿಶೇಷ ಫೋಟೋ ಸದ್ಯ ವೈರಲ್ ಆಗಿದೆ.
ರಾಜೇಂದ್ರ ಸೆಮಾಲ್ಕರ್ ಅನ್ನೋರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ಫೋಟೋವನ್ನ ಹಂಚಿಕೊಂಡಿದ್ದಾರೆ. ಇದನ್ನ ಕಂಡ ಜನ ಕೂಡ ಈ ಫೋಟೋವನ್ನ ಹೆಚ್ಚು ಹೆಚ್ಚು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಈ ಮೂರು ಹಾವುಗಳನ್ನ ರಕ್ಷಿಸಿ ಅಮರಾವತಿ ಜಿಲ್ಲೆಯ ಹರಿಸಾಲ್ ಅರಣ್ಯದಲ್ಲಿ ಬಿಡಲಾಗಿದೆ. ಆಗಲೇ ಈ ಮೂರು ಕೋಬ್ರಾಗಳು ಒಂದೇ ಮರದ ಕಾಂಡದಲ್ಲಿ ಕುಳಿತು ಗಮನ ಸೆಳೆದಿವೆ.
PublicNext
17/11/2021 07:45 pm