ಹಾಸನ: ವರ್ಷಕ್ಕೆ ಒಮ್ಮೆ ದರ್ಶನ ಕೊಡುವ ಹಾಸನಾಂಬೆಗೆ ಭಕ್ತರು ವಿಶೇಷ, ಮತ್ತು ವಿಚಿತ್ರ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
• ಬೇಡಿದ ವರ ನೀಡಿದ್ರೆ 5 ಸಾವಿರ ಕೊಡ್ತೀನಿ.
• ‘ಆ ಧರ್ಮಾತ್ಮ ಪುನೀತ್ ಬದಲಿಗೆ’ ‘ನಾಟಕವಾಡುವ ರಾಜಕಾರಣಿಗಳಿಗೆ ಹೀಗೆ ಮಾಡು’,
• ರೇವಣ್ಣ ಕುಟುಂಬಸ್ಥರು ಜನ್ರ ಪ್ರಾಣ ಹಿಂಡುತ್ತಿದ್ದಾರೆ, ಅವರನ್ನು ಸೋಲಿಸು ತಾಯಿ.
• ನನ್ನ ಪುತ್ರಿಯರಿಗೆ ಮದ್ವೆ ಮಾಡಿಸು.
• ಒಂದು ವರ್ಷದೊಳಗೆ ಮನೆ ಕಟ್ಟಿದರೆ 301 ರೂಪಾಯಿಯನ್ನ ನಿನ್ನ ಹುಂಡಿಗೆ ಕಾಣಿಕೆ ಹಾಕುವೆ
• ತಾಯಿ ನನಗೆ ಬೇಗ ಪ್ರಮೋಷನ್ ಕೊಡಮ್ಮ
• ಭೂಗಳ್ಳನಿಂದ ನನ್ನ ಭೂಮಿ ಕೊಡಿಸು
• ಕರೊನಾ ತೊಲಗಿಸಿ ಎಲ್ಲರಿಗೂ ಒಳ್ಳೆಯ ಆರೋಗ್ಯ ಕೊಡು
• ನನಗೆ ಗಂಡು ಮಗು ಕರುಣಿಸು
• ನಾನು ಬೇಡಿದ ವರವ ಕೊಟ್ಟರೆ ನಿನ್ನ ಹುಂಡಿಗೆ ಐದು ಸಾವಿರ ರೂಪಾಯಿ ಕೊಡ್ತೇನೆ
• ಗಂಡನ ಕುಡಿತದ ಚಟ ಹೋಗಲಿ
• ನಾನು ಇಷ್ಟಪಟ್ಟ ಹುಡುಗನ ಜತೆ ಮದುವೆ ಮಾಡಿಸು ತಾಯಿ
ಹೀಗೆ ತರೇಹವಾರಿ ಪತ್ರಗಳು ಹಾಸನಾಂಬೆ ಹುಂಡಿಯಲ್ಲಿ ಸಿಕ್ಕಿವೆ.
ಹೌದು ಹಾಸನಾಂಭೆ ದರ್ಶನೋತ್ಸವದ ಬಳಿಕ ದೇಗುಲದ ಹುಂಡಿ ಹಣ ಎಣಿಕೆ ಕಾರ್ಯ ಇಂದು ( ಸೋಮವಾರ) ನಡೆಯಿತು. ಆ ವೇಳೆ ಭಕ್ತರು ದೇವಿಗೆ ವಿಭಿನ್ನ ಕೋರಿಕೆಯೊಂದಿಗೆ ಬರೆದಿರುವ ನೂರಾರು ಪತ್ರಗಳೂ ಸಿಕ್ಕಿವೆ.
ಕಾಗದ ಬರೆದು ದೇವಿಗೆ ಮೊರೆ ಇಟ್ಟಿರುವ ಭಕ್ತರಿಗೆ ದೇವಿ ಅವರ ಆಸೆ ಈಡೇರಿಸಲಿ ಜೈ ಹಾಸನಾಂಬೆ.
PublicNext
08/11/2021 12:38 pm