ಚಿತ್ರದುರ್ಗ : ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಮಠದ ಹಿರಿಯ ಶ್ರೀಗಳಾದ ಮಾರ್ಕಂಡೇಯ ಮುನಿಸ್ವಾಮಿಜೀ (75) ಗುರುವಾರ ಸಂಜೆ ಉಸಿರಾಟ ತೊಂದರೆಯಿಂದ ನಿಧನರಾದರು.ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಆದಿಜಾಂಬವ ಮಠದಲ್ಲಿ ಸಂಜೆ 5.30 ರ ಸಮಯದಲ್ಲಿ ಶ್ರೀಗಳಿಗೆ ಉಸಿರಾಟದ ತೊಂದರೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಾರಿನ ಚಾಲಕನನ್ನು ಕರೆದುಕೊಂಡು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆ ವಾಂತಿ ಮಾಡಿಕೊಂಡಿದ್ದು, ಮಾತು ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಚಾಲಕ ತಕ್ಷಣ ಶ್ರೀಗಳನ್ನು ಹಿರಿಯೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ತಪಾಸಣೆ ನಡೆಸಿದಾಗ ಆದರೆ ಅಷ್ಟೋತ್ತಿಗಾಗಲೇ ಶ್ರೀಗಳು ಕೊನೆಯುಸಿರೆಳೆದಿದ್ದಾರೆ. ಇನ್ನೂ ವೈದ್ಯರು ಶ್ರೀಗಳ ನಿಧನವನ್ನು ದೃಢಪಡಿಸಿರು. ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಮೂಲಗಳಿಂದ ವರದಿಯಾಗಿದೆ.
ಶ್ರೀಗಳು ಆದಿ ಜಾಂಬವ ಮುನಿವಂಶ ಪಾರಂಪರೆಯಿಂದ ಕಾಷಾಯ ಧರಿಸಿ ಶ್ರೀಮಠದ ಸೇವೆಯಲ್ಲಿ ತೊಡಗಿದ್ದರು. ಪ್ರತಿ ವರ್ಷ ಸಾಮೂಹಿಕ ವಿವಾಹ ಹಾಗೂ ಕೋಡಿಹಳ್ಳಿ ಗ್ರಾಮದಲ್ಲಿ ನಡೆಯುವ ಶ್ರೀ ರೇಣುಕಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮದ ಏರ್ಪಡಿಸಿಕೊಂಡು ಬರುತ್ತಿರುವುದು ಶ್ರೀಗಳ ಮಹಾ ಕಾರ್ಯವಾಗಿತ್ತು.
ಶ್ರೀಗಳ ನಿಧನಕ್ಕೆ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್, ಜಿಲ್ಲೆಯ ರಾಜಕೀಯ ಪ್ರತಿನಿಧಿಗಳು, ಮಠಾಧೀಶರು ಸೇರಿದಂತೆ ಭಕ್ತ ಸಮೂಹದವರು ಸಂತಾಪ ಸೂಚಿಸಿದ್ದಾರೆ.
PublicNext
04/11/2021 08:32 pm