ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಕ್ಷಿಣ ಕೋರಿಯಾ : ಇಲ್ಲಿ ಬಾಡಿಗೆಗೆ ಸಂಬಂಧಿಕರೂ ಸಿಕ್ತಾರೆ !

ದಕ್ಷಿಣ ಕೋರಿಯಾ: ಇಲ್ಲಿ ಬಾಡಿಗೆಗೆ ಸಂಬಂಧಿಕರು ಸಿಗುತ್ತಾರೆ. ಒಂದು ಗಂಟೆಗೆ 1,500 ರೂಪಾಯಿ ಚಾರ್ಜ್ ಮಾಡುತ್ತಾರಂತೆ. ಇದನ್ನ ಕೇಳಿದಾಗ, ಓದಿದಾಗ ನಿಮಗೆ ಆಶ್ಚರ್ಯ ಅನಿಸಬಹುದು.ಆದರೆ ಇದು ಸತ್ಯ.ಇದು ಕೋವಿಡ್ ಕೊಟ್ಟ ಕೊಡುಗೆ. ಬನ್ನಿ ಹೇಳ್ತೀವಿ.

ದಕ್ಷಿಣ ಕೋರಿಯಾದ ಜನಕ್ಕೆ ಸಂಬಂಧಿಕರು ಬೇಕು. ಮದುವೆ ಸಮಾರಂಭದಲ್ಲಿ ಅತಿ ಹೆಚ್ಚು ಸಂಬಂಧಿಕರು ಇರಲೇಬೇಕು. ಹಾಗೆ ಇದ್ದರೆ ಮಾತ್ರ ಅಂತಹ ವ್ಯಕ್ತಿಗೆ ಸಮಾಜದಲ್ಲಿ ಜಾಸ್ತಿ ಗೌರವ.

ಆದರೆ ಕೋವಿಡ್ ಈ ಎಲ್ಲ ನಂಬಿಕೆಗಳಿಗೂ ನೀರು ಎರಚಿತ್ತು. ಮದುವೆ ಸಮಾರಂಭಕ್ಕೆ ಜನರೇ ಬರುತ್ತಿರಲಿಲ್ಲ. ಆಗಲೇ ಇಲ್ಲಿ ಬಾಡಿಗೆ ಸಂಬಂಧಿಕರ ಪ್ಲಾನ್ ವರ್ಕೌಟ್ ಆಗಿದೆ. 1,500 ರೂಪಾಯಿ ಕೊಟ್ಟರೆ ನಿಜವಾದ ಸಂಬಂಧಿಕರಿಗಿಂತಲೂ ಅದ್ಭುತವಾಗಿಯೇ ಅವರು ನಟಿಸುತ್ತಾರೆ.ಅದಕ್ಕೇನೆ ಇಲ್ಲಿ ಇದು ಚಾಲ್ತಿಯಲ್ಲಿದೆ.ಆದರೆ ಕೋವಿಡ್ ಮತ್ತೆ ದಾಳಿ ಇಡ್ತಿದೆ. ಆಗ ಇಲ್ಲಿಯ ಜನ ಮತ್ಯಾವ ಐಡಿಯಾ ಮಾಡ್ತಾರೋ ಏನೋ ನೋಡ್ಬೇಕು.

Edited By :
PublicNext

PublicNext

03/11/2021 06:53 pm

Cinque Terre

22.77 K

Cinque Terre

2

ಸಂಬಂಧಿತ ಸುದ್ದಿ