ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೇದಿಕೆ ಏರಿ ಪೋಪ್ ಫ್ರಾನ್ಸಿಸ್ ಅವರ ಟೋಪಿಯನ್ನೇ ಕೇಳಿದ ಬಾಲಕ!

ವ್ಯಾಟಿಕನ್ ಸಿಟಿ: ಮಕ್ಕಳಿಗೆ ಕೆಲವು ಸಂದರ್ಭಗಳಲ್ಲಿ ಯಾವುದರ ಮೇಲೆ ಒಲವಾಗುತ್ತದೆಯೋ ಗೊತ್ತಿಲ್ಲ. ಇನ್ನು ಅವರ ಕಣ್ಣಿಗೆ ಬಿದ್ದ ವಸ್ತುವನ್ನು ಪಡೆಯುವವರೆಗೂ ಅವರು ಸುಮ್ಮನಾಗುವುದಿಲ್ಲ. ಇಲ್ಲೊಂದು ಘಟನೆಯಲ್ಲಿ ಕ್ಯಾಥೋಲಿಕ್ ಕ್ರಿಶ್ಚಿಯನ್ ಧರ್ಮಗುರು ಹಾಗೂ ವ್ಯಾಟಿಕನ್ ಸಿಟಿ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಸಭೆಯಲ್ಲಿ, ಪುಟ್ಟ ಬಾಲಕನೋರ್ವ ಏಕಾಏಕಿ ವೇದಿಕೆ ಏರಿ ಪೋಪ್ ಫ್ರಾನ್ಸಿಸ್ ಅವರ ಟೋಪಿ ಕೇಳಿದ್ದಾನೆ.

ಫ್ರಾನ್ಸಿಸ್ ಅವರತ್ತ ತೆರಳಿದ ಬಾಲಕ, ಧರ್ಮಗುರುವಿಗೆ ತಮ್ಮ ಟೋಪಿಯನ್ನು ಕೊಡುವಂತೆ ಕೇಳಿದ್ದಾನೆ. ಈ ವೇಳೆ ನಸುನಗುತ್ತಲೇ ಬಾಲಕನನ್ನು ತಮ್ಮ ಬಳಿ ಕೂರಿಸಿಕೊಂಡ ಪೋಪ್ ಫ್ರಾನ್ಸಿಸ್, ಆತನನ್ನು ಆತ್ಮೀಯವಾಗಿ ಮಾತನಾಡಿಸಿ ಬಳಿಕ ಬಾಲಕನಿಗೆ ತಾವು ಧರಿಸುವ ಬಿಳಿ ಬಣ್ಣದ ಟೋಪಿಯದ್ದೇ ಮಾದರಿಯ ಟೋಪಿಯೊಂದನ್ನು ಉಡುಗೊರೆಯಾಗಿ ನೀಡಿದರು.

ಬಳಿಕ ತಮ್ಮ ಭಾಷಣದಲ್ಲಿ ಪ್ರತಿಯೊಬ್ಬರೂ ತಮ್ಮೊಳಗಿರುವ ಮಗುವನ್ನು ಜೀವಂತವಾಗಿರಿಸದಿದ್ದರೆ ಸ್ವರ್ಗ ದೊರೆಯುವುದಿಲ್ಲ ಎಂಬ ಯೇಸುವಿನ ಮಾತು ಸತ್ಯ ಎಂದು ಪೋಪ್ ಫ್ರಾನ್ಸಿಸ್ ನುಡಿದರು.ಭಗವಂತನನ್ನು ಸಮೀಪಿಸಲು ಈ ಮಗು ತೋರಿದ ಧೈರ್ಯ ನಮಗೆ ಅನುಕರಣೀಯ. ಇದಕ್ಕಾಗಿ ನಾನು ಈ ಪುಟ್ಟ ಬಾಲಕನಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

Edited By : Nirmala Aralikatti
PublicNext

PublicNext

20/10/2021 07:11 pm

Cinque Terre

27.09 K

Cinque Terre

1

ಸಂಬಂಧಿತ ಸುದ್ದಿ