ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೌರ ಕಾರ್ಮಿಕ ಮಹಿಳೆ ಪ್ರಾಮಾಣಿಕತೆ : ಕಸದಲ್ಲಿ ಸಿಕ್ಕ ಚಿನ್ನದ ನಾಣ್ಯ ಮಾಲೀಕರಿಗೆ ವಾಪಸ್

ಚೆನ್ನೈ: ಕಾಲಬದಲಾದಂತೆ ದಯೆ, ಕರುಣೆ, ಅಂತಕರಣ ಮರೆಯಾಗುತ್ತಿದೆ ಎನ್ನುವವರು ಮಧ್ಯೆ ಇಲ್ಲೊಬ್ಬ ಪೌರ ಕಾರ್ಮಿಕ ಮಹಿಳೆ ಕಸದಲ್ಲಿ ಸಿಕ್ಕ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ತಮಿಳುನಾಡಿನ ತಿರುವೊಟ್ಟಿಯೂರಿನಲ್ಲಿ ಕಸ ವಿಲೇವಾರಿ ವಿಭಾಗದ ಕೆಲಸಗಾರ, ಕಸದೊಳಗೆ ಸಿಕ್ಕ 7.5 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ಚಿನ್ನದ ನಾಣ್ಯವನ್ನು ಅದರ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ತಿರುವೊಟ್ಟಿಯೂರಿನ ಅಣ್ಣಾಮಲೈ ನಗರದ ನಾಣ್ಯದ ಮಾಲೀಕ ಗಣೇಶ್ ರಾಮನ್ ಅವರು ಚಿನ್ನದ ನಾಣ್ಯವನ್ನು ಖರೀದಿಸಿ ಅದನ್ನು ಹಾಸಿಗೆಯ ಕೆಳಗೆ ಮುಚ್ಚಿಟ್ಟಿದ್ದರು. ಅವರ ಪತ್ನಿ ಕಣ್ಣುತಪ್ಪಿ ಚಿನ್ನದ ನಾಣ್ಯ ಇತರ ತ್ಯಾಜ್ಯದೊಂದಿಗೆ ಕಸದ ತೊಟ್ಟಿಯಲ್ಲಿ ಎಸೆದಿದ್ದರು.

ನಾಣ್ಯ ನಾಪತ್ತೆಯಾದ ನಂತರ ರಾಮನ್ ದೂರು ನೀಡಿದ್ದರು. ಆ ದಿನ ಯಾರು ಕಸವನ್ನು ತೆರವುಗೊಳಿಸುತ್ತಿದ್ದರು ಎಂದು ಪತ್ತೆಗೆ ಪೊಲೀಸರು ಸಿಸಿಟಿವಿ ದಶ್ಯಗಳನ್ನು ಪರಿಶೀಲಿಸಿದ್ದರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಪೌರ ಕಾರ್ಮಿಕ ಮಹಿಳೆ ಮೇರಿ ಕಸದಲ್ಲಿ ಸಿಕ್ಕ ಚಿನ್ನವನ್ನು ತನ್ನ ಮ್ಯಾನೇಜರ್ ಮೂಲಕ ಅಧಿಕಾರಿಗಳಿಗೆ ನಾಣ್ಯವನ್ನು ಹಿಂದಿರುಗಿಸಿದ್ದಾರೆ.

ಸದ್ಯ ಮೇರಿ ಪ್ರಾಮಾಣಿಕತೆಗಾಗಿ ಸಂರಕ್ಷಣಾ ಕಾರ್ಯಕರ್ತೆ ಎಂದು ಪ್ರಶಂಸಿಸಲಾಗಿದೆ.

Edited By : Nirmala Aralikatti
PublicNext

PublicNext

19/10/2021 10:18 pm

Cinque Terre

65.05 K

Cinque Terre

11