ಎಲ್ಲಾ ಅನುಕೂಲತೆ ಇದ್ದರು ಏನ್ನನ್ನಾದರೂ ಸಾಧಿಸಬೇಕೆಂದರೆ ಅನೇಕರು ಅಂದುಕೊಳ್ಳುವುದು ಇದು ನಮ್ಮ ಕೈಲಾಗೋ ಕೆಲಸವಲ್ಲ ಎಂದು. ಅದು ನಿಜವಲ್ಲ, ಮನಸ್ಸು ಮಾಡಿದರೆ ಯಾವುದು ಕಷ್ಟವೇ ಅಲ್ಲ.
ಅದೇ ರೀತಿ ಕೂತಲ್ಲೇ ಯಾವುದನ್ನೂ ಮಾಡಲಾಗದು. ಯಾವುದೇ ಸಾಧನೆಗೆ ಪರಿಶ್ರಮ ಅತಿ ಮುಖ್ಯ.. ಸಾಧಿಸುವೇ ಎನ್ನುವ ಛಲವೊಂದಿದ್ದರೆ ಯಾವುದು ಅಸಾಧ್ಯವಲ್ಲ ಎನ್ನುವುದಕ್ಕೆ ಈ ವಿಶೇಷ ಚೇತನ ಸಾಕ್ಷಿ..
ಬದುಕಿನಲ್ಲಿ ಸವಾಲುಗಳು ಹೊಸದಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಸವಾಲುಗಳು ಇದ್ದದ್ದೇ. ಆದರೆ, ಈ ಸವಾಲುಗಳನ್ನು ಮೆಟ್ಟಿ ನಿಂತು ಬದುಕುವುದು ಮುಖ್ಯ. ಆಗಲೇ ಬದುಕಿಗೊಂದು ಅರ್ಥ ಬರುವುದು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿಯ ವ್ಯಕ್ತಿಯನ್ನು ಕಂಡರೇ ನಿಮಗೆ ಹೆಮ್ಮೆಯಾಗುತ್ತದೆ. ಹಾಗಾಗಿಯೇ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವಿಕಲಚೇತನರೊಬ್ಬರು ಸೈಕಲ್ನಲ್ಲಿ ಕೆಲಸಕ್ಕೆ ಹೋಗುತ್ತಿರುವ ದೃಶ್ಯವಿದೆ.
ಒಂದು ಕಾಲಿಲ್ಲದಾತ ಕೋಲನ್ನು ಕಾಲಾಗಿಸಿಕೊಂಡು ಪೆಡಲ್ ತುಳಿಯುತ್ತಾ ಸಾಗುವ ದೃಶ್ಯ ಬದುಕಿನ ಅನಿವಾರ್ಯತೆಯನ್ನು ಬಿಂಬಿಸುತ್ತದೆ. ಜೊತೆಗೆ ಸಾಧನೆಗೆ ನ್ಯೂನ್ಯತೆ ತೊಡಕಲ್ಲ ಎನ್ನುವುದನ್ನು ಸಾಬೀತು ಮಾಡಿದೆ.
PublicNext
12/10/2021 09:09 am